
ಬೆಂಗಳೂರು: ಪೀಣ್ಯ– ಸಂಪಿಗೆ ರಸ್ತೆ ನಡುವೆ ಆರಂಭವಾಗಿರುವ ಹಸಿರು ಮಾರ್ಗದ ‘ನಮ್ಮ ಮೆಟ್ರೊ’ ಸಂಚಾರಕ್ಕೆ ರಜಾದಿನವಾದ ಭಾನುವಾರ ಪ್ರಯಾಣಿಕರಿಂದ ಮೇರೆ ಮೀರಿದ ಉತ್ಸಾಹ ವ್ಯಕ್ತವಾಗಿದೆ.
ಸಾರ್ವಜನಿಕ ಸೇವೆಗೆ ಸಮರ್ಪಣೆಯಾದ ಎರಡನೇ ದಿನ 60,000ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದರು. ಮೊದಲ ದಿನ 48,000 ಮಂದಿ ಪ್ರಯಾಣಿಸಿದ್ದರು. ಭಾನುವಾರ ಉತ್ಸಾಹ ಮತ್ತಷ್ಟು ಹೆಚ್ಚಿತ್ತು.
ಎಂ.ಜಿ.ರಸ್ತೆ– ಬೈಯಪ್ಪನಹಳ್ಳಿ ನಡುವಿನ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗಿ ಎರಡೂವರೆ ವರ್ಷಗಳು ಕಳೆದರೂ ಮೆಟ್ರೊ ಪ್ರಯಾಣ ಮಾಡುವ ಜನರ ಉತ್ಸಾಹ ಬತ್ತಿಲ್ಲ. 2011ರ ಅಕ್ಟೋಬರ್ 20ರಂದು ನಗರದಲ್ಲಿ ಮೆಟ್ರೊ ಸಂಚಾರ ಆರಂಭವಾಗಿತ್ತು. ಸಂಜೆ 4ರಿಂದ ರಾತ್ರಿ 11ರ ವರೆಗಿನ 45 ಟ್ರಿಪ್‌ಗಳಲ್ಲಿ 39,000 ಮಂದಿ ಸಂಚಾರ ನಡೆಸಿದ್ದರು.
ನವದೆಹಲಿಯಲ್ಲಿ ಮೆಟ್ರೊ ಸಂಚಾರ 2002ರ ಡಿ. 24ರಂದು ಆರಂಭವಾಗಿತ್ತು. ಶ್ರದ್ಧಾ ಹಾಗೂ ತೀಸ್ ಹಝಾರಿ ನಡುವಿನ ಮಾರ್ಗದಲ್ಲಿ (8.3 ಕಿ.ಮೀ) ಮೊದಲ ದಿನವೇ ಎರಡು ಲಕ್ಷ ಮಂದಿ ಸಂಚಾರ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.