
ಪ್ರಜಾವಾಣಿ ವಾರ್ತೆಬೆಂಗಳೂರು: ರಾಜ್ಯದ ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಮತ್ತು ಗುಪ್ತಚರ ವಿಭಾಗದ ಪೊಲೀಸರಿಗೆ ಇಸ್ರೇಲ್ ಪಡೆಗಳಿಂದ ಉನ್ನತ ಮಟ್ಟದ ತರಬೇತಿ ಕೊಡಿಸಲು ಸರ್ಕಾರ ಯೋಚಿಸಿದ್ದು, ಈ ಸಂಬಂಧ ಭಾರತದಲ್ಲಿನ ಇಸ್ರೇಲ್ ರಾಯಭಾರಿ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದರು.
ಬೆಂಗಳೂರಿನಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಕಚೇರಿ ಆರಂಭಿಸುವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ಅಲೋನ ಅಷ್ಫಿಜ್ ಬುಧವಾರ ವಿಧಾನಸೌಧದಲ್ಲಿ ಅಶೋಕ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಬಳಿಕ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, `ಭಯೋತ್ಪಾದನೆ ನಿಗ್ರಹ ಕುರಿತು ರಾಜ್ಯದ ಪೊಲೀಸರಿಗೆ ತರಬೇತಿ ನೀಡುವ ಕೋರಿಕೆ ಬಗ್ಗೆ ಇಸ್ರೇಲ್ ರಾಯಭಾರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.