ADVERTISEMENT

ವರ್ಗಾವಣೆ ಆದೇಶ ರದ್ದು?

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST

ಬೆಂಗಳೂರು: ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದಿನವೇ ಆಯಕಟ್ಟಿನ ಸ್ಥಳಗಳಿಗೆ ವರ್ಗವಾಗಿದ್ದ ಅವರ ನಂಬಿಕಸ್ಥ ಐಪಿಎಸ್ ಅಧಿಕಾರಿಗಳು, ಬಿಜೆಪಿ ಅಧಿಕಾರ ಕಳೆದುಕೊಂಡ ಕಾರಣ ಮತ್ತೆ ಹಿಂದಿನ ಸ್ಥಳಗಳಿಗೇ ಮರಳುವ ಸಾಧ್ಯತೆ ನಿಚ್ಚಳವಾಗಿದೆ.

ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಹಾಗೂ ಡಿಐಜಿ ಸಂದೀಪ್‌ ಪಾಟೀಲ್‌ ಅವರನ್ನು ಗುಪ್ತಚರ ವಿಭಾಗಕ್ಕೆ, ಬೀದರ್ ಎಸ್ಪಿ ಡಿ.ದೇವರಾಜ್ ಅವರನ್ನು ಬೆಂಗ
ಳೂರು ಕೇಂದ್ರ ವಿಭಾಗಕ್ಕೆ, ಎಸಿಬಿ ಎಸ್ಪಿ ಎಸ್.ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗಕ್ಕೆ ಹಾಗೂ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಿ ಮೇ 17ರಂದು ಆದೇಶ ಹೊರಡಿಸಲಾಗಿತ್ತು.

ಅಣ್ಣಾಮಲೈ ಮರುದಿನವೇ ರಾಮನಗರಕ್ಕೆ ಬಂದು ಕರ್ತವ್ಯ ಪ್ರಾರಂಭಿಸಿದ್ದರು. ಆದರೆ, ಹಿಂದಿನ ಆದೇಶ ರದ್ದುಗೊಳಿಸಿ ಭಾನುವಾರ ಹೊಸ ಆದೇಶ ಹೊರಡಿಸಿರುವ ಗೃಹಇಲಾಖೆ, ಮುಂದಿನ ಸೂಚನೆವರೆಗೂ ಚಿಕ್ಕಮಗಳೂರಿನಲ್ಲೇ ಕರ್ತವ್ಯ ನಿರ್ವಹಿಸುವಂತೆ ಹೇಳಿದೆ. ಹೀಗಾಗಿ, ಅವರು ವಾಪಸ್ ಹೋಗಿದ್ದಾರೆ.

ADVERTISEMENT

ಮತ್ತೊಂದೆಡೆ ವರ್ಗಾವಣೆ ಆದೇಶ ಹೊರಬಿದ್ದು ಐದು ದಿನ ಕಳೆದರೂ, ದೇವರಾಜ್ ಹಾಗೂ ಗಿರೀಶ್‌ಗೆ ಡಿಜಿ–ಐಜಿಪಿ ಅವರಿಂದ ಚಾಲನಾ ಆದೇಶ (ಮೂವ್‌ಮೆಂಟ್ ಆರ್ಡರ್) ಸಿಕ್ಕಿಲ್ಲ. ಹೀಗಾಗಿ, ಅವರೂ ಹಿಂದಿನ ಸ್ಥಳಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.

‘ನಾವೂ ಗೊಂದಲದಲ್ಲಿದ್ದೇವೆ. ಹೊಸ ಸರ್ಕಾರ ರಚನೆಯಾದ ಬಳಿಕ ಸ್ಪಷ್ಟತೆ ಸಿಗಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮರ್‌ಕುಮಾರ್ ಪಾಂಡೆ, ಸಂದೀಪ್ ಪಾಟೀಲ್ಆ ದೇಶ ಹೊರಬಿದ್ದ ದಿನವೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ಸದ್ಯ ಗುಪ್ತಚರ ವಿಭಾಗದಲ್ಲಿ ಮುಂದುವರಿದಿದ್ದಾರೆ. . ಇವರೂ ಹಿಂದಿನ ಸ್ಥಳಗಳಿಗೆ ವಾಪಸ್ ಹೋಗಲಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.