ADVERTISEMENT

ವಿಎಲ್‍ಎನ್: ಹಿರಿಯ ನಾಗರಿಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 20:02 IST
Last Updated 5 ಜೂನ್ 2017, 20:02 IST
ರಾಮಾಚಾರ್ ಟಿ.ಎಂ., ಡಾ. ಎನ್. ಬಾಲಸುಬ್ರಮಣಿಯನ್ ದಂಪತಿ,  ಅಶ್ವತ್ಥನಾರಾಯಣ್ ಎಸ್.ಕೆ.,  ಫಿಲಾರ್ ಭವಾನಿಶಂಕರ್ ದಂಪತಿ, ಲಕ್ಷ್ಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಿ. ಲಕ್ಷ್ಮೀನಾರಾಯಣ್, ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಎಂ. ಪಾಟೀಲ್, ನಿವೃತ್ತ ಪ್ರಾಂಶುಪಾಲ  ಪ್ರೊ. ನಾರಾಯಣ ಮಾದಾಪುರ್, ಡಿ.ಎಚ್. ಶಂಕರಮೂರ್ತಿ, ವಿ.ಎಲ್‍.ಎನ್ ಪ್ರಬುದ್ಧಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಷ್ಮಾಮೂರ್ತಿ ಇದ್ದಾರೆ

ಬೆಂಗಳೂರು: ‘ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕುಟುಂಬ ವ್ಯವಸ್ಥೆಯಲ್ಲೂ ಬದಲಾವಣೆಗೆ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ  ಬದುಕಿನ ಮುಸ್ಸಂಜೆಯಲ್ಲಿರುವ ವೃದ್ಧರಿಗೆ ಗೌರವಯುತ ಜೀವನ ನಡೆಸಲು ವೃದ್ಧಾಶ್ರಮಗಳು ಅನಿವಾರ್ಯವಾಗಿವೆ’  ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.

ನಗರದ ನಿರ್ಮಾಣ್ ಶೆಲ್ಟರ್ಸ್ ಆಶ್ರಯದ ವಿ.ಎಲ್‍.ಎನ್ ಪ್ರಬುದ್ಧಾಲಯದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ನಿಸರ್ಗ ಬಡಾವಣೆಯ ಐವರು ಹಿರಿಯರಿಗೆ   ವಿಎಲ್‍ಎನ್ ಹಿರಿಯ ನಾಗರಿಕರ  ಆಜೀವ ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ವೃದ್ಧಾಶ್ರಮಗಳಿಗೆ ಕುಟುಂಬದ ಹಿರಿಯ ಜೀವಗಳನ್ನು ಕಳಿಸುವುದು ಸರಿ ಅಥವಾ ತಪ್ಪು ಎಂದು ಪರಾಮರ್ಶೆ ಮಾಡುವುದಕ್ಕಿಂತ ಬದುಕಿನ  ವಾಸ್ತವಗಳನ್ನು ಅರಿತುಕೊಳ್ಳಬೇಕಾಗಿದೆ’ ಎಂದರು.

ADVERTISEMENT

ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಿ. ಲಕ್ಷ್ಮಿನಾರಾಯಣ್ ಮಾತನಾಡಿ, ‘ಈ ಪ್ರಶಸ್ತಿ ತಲಾ ₹ 10,000 ನಗದು, ಸ್ಮರಣ ಫಲಕ ಒಳಗೊಂಡಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.