ADVERTISEMENT

ವೀರ ಯೋಧರಿಗೆ ‘ಗರುಡ’ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:45 IST
Last Updated 14 ಡಿಸೆಂಬರ್ 2013, 19:45 IST
ಗರುಡ ಮಾಲ್‌ನಲ್ಲಿ  ಶನಿವಾರ ಪ್ರಾರಂಭವಾದ ‘ಭಾರತೀಯ ವೀರ ಯೋಧರಿಗೆ ಗರುಡ ನಮಸ್ಕಾರ’ ಶಾಪಿಂಗ್‌ ಉತ್ಸವ ಕಾರ್ಯಕ್ರಮದಲ್ಲಿ    ಗರುಡ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಜಿ. ಉದಯ್ ಅವರು ದಿ. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ–ತಾಯಿಯರಾದ ಉಣ್ಣಿ ಕೃಷ್ಣನ್‌ ಮತ್ತು ಧನಲಕ್ಷ್ಮಿ ಅವರಿಗೆ ಉಡುಗೊರೆ ನೀಡಿ, ಗೌರವಿಸಿದರು. ನಿವೃತ್ತ ಡಿಜಿಪಿ  ಬಿ.ಎನ್‌.ಗರುಡಾಚಾರ್‌ ಅವರನ್ನೂ ಚಿತ್ರದಲ್ಲಿ ಕಾಣಬಹುದು

ಬೆಂಗಳೂರು: ಗರುಡ ಮಾಲ್‌ನಲ್ಲಿ ನಡೆಯುವ ಈ ವರ್ಷದ ಶಾಪಿಂಗ್‌ ಉತ್ಸವವನ್ನು ವೀರ ಯೋಧರಿಗೆ ಸಮರ್ಪಿಸಲಾಗಿದೆ.
ಯೋಧರಿಗೆ ಗೌರವು ಸಲ್ಲಿಸಲು ‘ಭಾರ­ತೀಯ ವೀರ ಯೋಧರಿಗೆ ಗರುಡ ನಮಸ್ಕಾರ’ ಎಂಬ ಶಾಪಿಂಗ್‌ ಉತ್ಸವ­ವನ್ನು ಶನಿವಾರದಿಂದ ಆಯೋಜಿಸಿದೆ.

ಉತ್ಸವದ ಅಂಗವಾಗಿ ಮಾಲ್‌ನ ಹೊರ ಆವರಣದಲ್ಲಿ ಕಾರ್ಗಿಲ್ ಕದನ, ನೈಸರ್ಗಿಕ ವಿಕೋಪ ಎದುರಾದಾಗ ಜನರ ಪ್ರಾಣ, ಆಸ್ತಿ ರಕ್ಷಿಸುವ ಭಾರ­ತೀಯ ಯೋಧರ ಶ್ರಮದಾನ, ರಾಷ್ಟ್ರ­ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಸೈನಿಕರ ಪ್ರತಿಕೃತಿಗಳು  ನೋಡುಗರನ್ನು ಸೆಳೆಯುತ್ತಿವೆ.

ಮಾಲ್‌ನ ಒಳಗೆ ಮುಂಬೈ ಮೇಲಿನ ಭಯೋ­ತ್ಪಾದಕರ ದಾಳಿಯನ್ನು ಹಿಮ್ಮೆ­ಟ್ಟಿ­ಸಿದ ಯೋಧರು, ಭಾರತ -ಚೀನಾ ಹಾಗೂ ಭಾರತ- ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶಗಳ ಕಟೌಟ್‌­ಗಳನ್ನು ನಿಲ್ಲಿಸಲಾಗಿದೆ.

ಮಾಲ್ ಒಳಗಿನ ಪ್ರತಿಯೊಂದು ಕಂಬಗಳಲ್ಲೂ ಭಾರತ ಸೇನೆಯ ಸಮಗ್ರ ಮಾಹಿತಿಯಿದೆ. ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಸೇನಾ ಜನರಲ್‌, ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ಧ್ವಜ ಹಾಗೂ ಲಾಂಛನಗಳು, ಸೇನಾ ಬ್ಯಾಂಡ್, ಪದಕಗಳು, ಪ್ರಶಸ್ತಿ ಕುರಿತ ಮಾಹಿತಿ, ವಾಯು ಸೇನೆಯ ಫೈಟರ್ ಜೆಟ್ ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿಯಿದೆ.

ಡಿ.  25 ರಂದು ಸಂಜೆ 6.30ಕ್ಕೆ ವಿಶೇಷವಾದ ಸೇನಾ ಬ್ಯಾಂಡ್ ಕೇಳುವ ಹಾಗೂ ನೋಡುವ ಅವಕಾಶವಿದೆ. ಉತ್ಸವವು ಜ.1 ರವರೆಗೆ ನಡೆಯಲಿದೆ.

ಶಾಪಿಂಗ್‌ ಉತ್ಸವವನ್ನು ಶನಿವಾರ ಮೇಜರ್ ಜನರಲ್ ಎ.ಕೆ. ಸಿಂಗ್ ಹಾಗೂ ಗರುಡ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಜಿ. ಉದಯ್ ಉದ್ಘಾಟಿಸಿದರು.

ಭಾರತೀಯ ಸೇನೆಯ ಅಂಚೆಚೀಟಿ ಸಂಗ್ರಹಗಳ ಪ್ರದರ್ಶನವನ್ನು ಏರ್ಪಡಿಸ­-ಲಾಗಿತ್ತು. ಗರುಡ ಮಾಲ್ ತ್ರಿವರ್ಣ­ಗಳಿಂದ ಸಿಂಗಾರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.