ADVERTISEMENT

ವೈಯಕ್ತಿಕ ದ್ವೇಷ: ಗುಡಿಸಲಿಗೆ ಬೆಂಕಿ

ಒಡವೆ, ಸುಮಾರು ೩೦ ಸಾವಿರ ನಷ್ಟ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:26 IST
Last Updated 23 ಮಾರ್ಚ್ 2014, 20:26 IST

ಕನಕಪುರ:  ವೈಯಕ್ತಿಕ ದ್ವೇಷದ  ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಳ್ಳಿಮಾರನಹಳ್ಳಿ ಗ್ರಾಮ­ದಲ್ಲಿ ನಡೆದಿದೆ.

ಈ ಗುಡಿಸಲು ಕೂಲಿ ಕಾರ್ಮಿಕ ಮರಿಯಪ್ಪ ಅವರಿಗೆ ಸೇರಿ­ದ್ದಾಗಿದೆ.

ಇದೇ ಗ್ರಾಮದ ವೆಂಕಟೇಗೌಡ ಅವರ ಮಗ ಶ್ರೀನಿವಾಸ್‌ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಮರಿಯಪ್ಪ ಅವರ ಗುಡಿಸಲಿನ ಹಿಂದಿನ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ವೆಂಕಟೇ­ಗೌಡ ಕೃಷಿ ಮಾಡುತ್ತಿದ್ದಾರೆ.

‘ರಸ್ತೆಯ ಸಮೀಪವಿರುವ ಮರಿ­ಯಪ್ಪನ ಗುಡಿಸಲನ್ನು ತೆರವು­ಗೊಳಿಸದರೆ ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಬ­ಹುದೆಂಬ ದುರುದ್ದೇಶ­ದಿಂದ ಶ್ರೀನಿವಾಸ ಗುಡಿಸಲಿಗೆ ಬೆಂಕಿ ಹಚ್ಚಿ­ದ್ದಾನೆ’ ಎಂದು ಮರಿಯಪ್ಪನ  ಪತ್ನಿ ದೇವಮ್ಮ ದೂರಿದ್ದಾರೆ.

ಗುಡಿಸಲಿನ ಒಳಗಿದ್ದ ಒಡವೆ ಮತ್ತು ಸಾಮಾನುಗಳು ಸುಟ್ಟು ಹೋಗಿದ್ದು, ಸುಮಾರು ೩೦ ಸಾವಿರ ನಷ್ಟವಾಗಿದೆ ಎನ್ನಲಾಗಿದೆ. ಶ್ರೀನಿವಾಸ್‌ ವಿರುದ್ಧ ದೂರು ದಾಖಲಾಗಿದೆ. ಪಿ.ಎಸ್ಸೈ ಹೇಮಂತ್‌­ಕುಮಾರ್‌ ಅವರು ಘಟ­­ನಾ­­­­­ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.