ADVERTISEMENT

ಶತಮಾನೋತ್ಸವ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 19:34 IST
Last Updated 10 ಆಗಸ್ಟ್ 2016, 19:34 IST
ಶತಮಾನೋತ್ಸವ ಲಾಂಛನ ಬಿಡುಗಡೆ
ಶತಮಾನೋತ್ಸವ ಲಾಂಛನ ಬಿಡುಗಡೆ   

ಬೆಂಗಳೂರು: ರಾಜ್ಯದ ಅತ್ಯಂತ  ಹಳೆಯ ಬ್ಯಾಂಕುಗಳಲ್ಲಿ ಒಂದಾಗಿರುವ ‘ದಿ ಭಾವಸಾರ ಕ್ಷತ್ರಿಯ ಕೋ–ಆಪರೇಟಿವ್‌ ಬ್ಯಾಂಕ್‌’ನ  ಶತಮಾನೋತ್ಸವ ಲಾಂಛನವನ್ನು ಬ್ಯಾಂಕ್‌ನ ಹಿರಿಯ ಸದಸ್ಯ ರಾಮಕೃಷ್ಣ ಭಾಂಬೋರೆ ಅವರು ಬುಧವಾರ ಬಿಡುಗಡೆಗೊಳಿಸಿದರು.

‘ಶತಮಾನೋತ್ಸವ ಸಂಭ್ರಮದಲ್ಲಿರುವ ಸಂಘಕ್ಕೆ ಇದು ಅವಿಸ್ಮರಣೀಯ ದಿನ. ಈ ಸಂದರ್ಭದಲ್ಲಿ ಬ್ಯಾಂಕ್‌ ಅಭಿವೃದ್ಧಿಗಾಗಿ ಶ್ರಮಿಸಿದ ಎಲ್ಲರನ್ನು ನೆನೆಯಲು ಇಷ್ಟಪಡುತ್ತೇನೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಚಂದ್ರಶೇಖರ್‌ ಅವರು ಹೇಳಿದರು.

‘ಜನವರಿಯಲ್ಲಿ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ನಿರೀಕ್ಷೆ ಇದೆ’ ಎಂದು ಚಂದ್ರಶೇಖರ್ ಅವರು ಹೇಳಿದರು. 

‘ಬ್ಯಾಂಕಿನ ಸದಸ್ಯತ್ವದ ಬಲವನ್ನು 20 ಸಾವಿರಕ್ಕೆ ಹೆಚ್ಚಿಸುವ ಗುರಿ ಸೇರಿದಂತೆ ಶತಮಾನೋತ್ಸವದ ನೆನಪಿಗಾಗಿ ನಾನಾ ಕಾರ್ಯಯೋಜನೆಗಳನ್ನು ದಿ ಭಾವಸಾರ ಕ್ಷತ್ರಿಯ ಕೋ–ಆಪರೇಟಿವ್‌ ಬ್ಯಾಂಕ್‌ ಹಮ್ಮಿಕೊಂಡಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.