ಚಲನಚಿತ್ರ ಸಬ್ಸಿಡಿ ಸಮಿತಿಯ ಅಧ್ಯಕ್ಷರಾಗಿದ್ದು ಲಂಚದ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಹಿರಿಯ ನಟ ಎಸ್.ಶಿವರಾಂ ಅವರಿಗೆ ಡಾ.ರಾಜ್‌ಕುಮಾರ್ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಯ್ಕೆ ಸಮಿತಿಯ ಕೆಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಸಂಗತಿಯೂ ಇದೀಗ ಬಯಲಾಗಿದೆ.
`ಶಿವರಾಂ ಅವರು ಕನ್ನಡ ಚಿತ್ರರಂಗದ ಹಿರಿಯರು. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದೂ ನಿಜ. ಆದರೆ ಈಗ ಸಬ್ಸಿಡಿ ಲಂಚದ ಪ್ರಕರಣದಲ್ಲಿ ಆರೋಪಿಯಾಗಿರುವ ಸಂದರ್ಭದಲ್ಲಿ ಅವರಿಗೆ ಡಾ.ರಾಜ್ ಹೆಸರಿನ ಪ್ರಶಸ್ತಿ ನೀಡುವುದು ಸೂಕ್ತವಲ್ಲ. ಕಳಂಕಿತರಾಗಿರುವಾಗ ನೈತಿಕವಾಗಿಯೂ ಇದು ಸರಿ ಎನ್ನಿಸುವುದಿಲ್ಲ~ ಎಂದು ಆಯ್ಕೆ ಸಮಿತಿಯ ಮೂವರು ಸದಸ್ಯರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
`ಪ್ರಶಸ್ತಿ ನೀಡಲೇಬೇಕೆಂದು ಪಟ್ಟು ಹಿಡಿದ ಸದಸ್ಯರೊಬ್ಬರು, ಆರೋಪ ಯಾರ ಮೇಲಿಲ್ಲ? ಯಡಿಯೂರಪ್ಪ ಅವರ ಮೇಲಿಲ್ಲವೆ? ಜನಾರ್ದನ ರೆಡ್ಡಿಯವರ ಮೇಲಿಲ್ಲವೆ? ಅದು ನಮಗೆ ಸಂಬಂಧಿಸಿದ ಸಂಗತಿ ಅಲ್ಲ. ನಾವು ಪ್ರಶಸ್ತಿ ನೀಡಿದರೆ ಏನೂ ತಪ್ಪಿಲ್ಲ~ ಎಂದೂ ವಾದಿಸಿದರಂತೆ!
ಕೊನೆಗೆ ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಭಾರತಿ ವಿಷ್ಣುವರ್ಧನ್ ಅವರು `ಪೊಲೀಸ್ ಕೇಸ್ ಬಗ್ಗೆ ಪ್ರಶಸ್ತಿ ಆಯ್ಕೆ ಸಮಿತಿಗೆ ಸರಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ ಪ್ರಶಸ್ತಿ ನೀಡಬಹುದು~ ಎಂದು ವಾದಿಸಿದರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.