ADVERTISEMENT

‘ಸಂಸ್ಕೃತಿ ಕೆಡಿಸುವ ಪ್ರಯತ್ನ ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:44 IST
Last Updated 2 ಜುಲೈ 2017, 19:44 IST
ವೀರಸೋಮೇಶ್ವರ ಸ್ವಾಮೀಜಿ ಪ್ರವಚನ ನೀಡಿದರು
ವೀರಸೋಮೇಶ್ವರ ಸ್ವಾಮೀಜಿ ಪ್ರವಚನ ನೀಡಿದರು   

ಬೆಂಗಳೂರು: ‘ವೈಚಾರಿಕ ನೆಲೆಯಲ್ಲಿ ಬೆಳೆದಿರುವ ನಾಡಿನ ಸಂಸ್ಕೃತಿಯನ್ನು ಕೆಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಆ ಕೆಲಸ ಯಶಸ್ವಿಯಾಗುವುದಿಲ್ಲ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ವಿಜಯನಗರದಲ್ಲಿ ಆಯೋಜಿಸಿದ್ದ ‘ಜನಜಾಗೃತಿಗಾಗಿ ಧರ್ಮ ಸಮಾವೇಶ’ದಲ್ಲಿ  ಮಾತನಾಡಿದ ಅವರು, ‘ತಂದೆ–ತಾಯಿ, ಬಂಧು–ಬಳಗ, ಮಿತ್ರರ ಸಂಬಂಧಗಳಿಗಿಂತ ಗುರು–ಶಿಷ್ಯರ ಸಂಬಂಧ ಹಿರಿದು. ಯೋಗ್ಯ ಗುರು ಮತ್ತು ಸಜ್ಜನರ ಸಹವಾಸದಿಂದ ಜೀವನ ಸಾರ್ಥಕ ಆಗುತ್ತದೆ’ ಎಂದರು.

‘ಮನುಷ್ಯ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಜೀವಿತಾವಧಿಯಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.