ADVERTISEMENT

ಸಸ್ಯಕಾಶಿಯಲ್ಲಿ ಆರ್ಕಿಡ್ ಪುಷ್ಪಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ವತಿಯಿಂದ ಆರ್ಕಿಡ್ ಪುಷ್ಪಗಳ ವಾರ್ಷಿಕ ಪ್ರದರ್ಶನಕ್ಕೆ ಲಾಲ್ ಬಾಗ್ ನಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಪ್ರದರ್ಶನದಲ್ಲಿ ಬಣ್ಣ– ಬಣ್ಣದ  50ಕ್ಕೂ ಹೆಚ್ಚು ತರಹೇವಾರಿ ಆರ್ಕಿಡ್ ಪುಷ್ಪಗಳು ನೋಡುಗರನ್ನು ಆಕರ್ಷಿ ಸಿದವು. 

ಕೇವಲ ಪುಷ್ಪ ವೀಕ್ಷಣೆ ಮಾಡುವು ದಷ್ಟೆ ಅಲ್ಲ ಅದನ್ನು  ಖರೀದಿಸಿ ಬೆಳೆಯಲು ಅವಕಾಶವಿದೆ. ಗಿಡಗಳನ್ನು ಆರೈಕೆ ಮಾಡುವ ವಿಧಾನದ ಬಗ್ಗೆ ಆಯೋಜಕರಿಂದ ಮಾಹಿತಿ ಪಡೆಯ ಬಹುದು.

ಪುಷ್ಪಮೇಳದ ವಿಶೇಷ: ಫಲನೊ ಪ್ಪಿಸ್, ಕ್ಲಾಟೇಯಾ, ಡೆಂಡ್ರೋಬಿಯಂ, ವೊಕೊರಾ, ಪ್ಯಾಪಿಲೊ ಪೀಡಿಯಂ  ಸೇರಿದಂತೆ ಕಾಡಿನ ಪುಷ್ಪಗಳು, ಮಿಶ್ರ ತಳಿಯ ಆರ್ಕಿಡ್ ಪುಷ್ಪಗಳಿವೆ.

ಕೆಲವು ಬಗೆಯ ಹೂಗಳು ನರ್ತಿ ಸುವಂತೆ, ಪಾದರಕ್ಷೆ, ಮಂಗ, ಜಿಂಕೆಯ ರೂಪ ಹೋಲುವ  ಹೂಗಳು ಕೂಡ ನೋಡುಗರಲ್ಲಿ ಬೆರಗು  ಮೂಡಿಸು ತ್ತದೆ. ಬಿಳಿ,  ಹಳದಿ, ಕೆಂಪು ನೇರಳೆ, ಕಂದು ಮಿಶ್ರಣ ಬಣ್ಣದ ಹೂಗಳಿವೆ.

ಪುಷ್ಪಮೇಳವನ್ನು ಉದ್ಘಾಟಿಸಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಡಿ.ಎಲ್. ಮಹೇಶ್ವರ್, ‘ಸೌಂದ ರ್ಯಕ್ಕೆ ಮತ್ತೊಂದು ಹೆಸರೆಂಬಂತಿರುವ ಪುಷ್ಪಗಳು ನೋಡುಗರಲ್ಲಿ ಹೊಸ ಉತ್ಸಾಹವನ್ನು ಉಂಟುಮಾಡುತ್ತದೆ. ಈ ಮೇಳವು ನೋಡುಗರಿಗೆ, ಪ್ರದರ್ಶ ಕರಿಗೆ ಹಾಗೂ ಉದ್ಯಮದಾರರಿಗೆ ಉತ್ತಮ ವೇದಿಕೆಯಾಗಿದೆ’ ಎಂದು ತಿಳಿಸಿದರು.

ಆರ್ಕಿಡ್ ಸಸಿ ತಜ್ಞರು ರಚಿಸಿರುವ ಲೇಖನಗಳ ಸಂಗ್ರಹ ಮಾಲೆಯನ್ನು ಬಿಡುಗಡೆ ಮಾಡಲಾಯಿತು.

ಸೊಸೈಟಿಯ ಅಧ್ಯಕ್ಷ ಡಾ.ಕೆ.ಎಸ್. ಶಶಿಧರ್, ‘ಸೊಸೈಟಿಯಲ್ಲಿ 300ಕ್ಕೂ ಅಧಿಕ ಮಂದಿ ಸದಸ್ಯರಿದ್ದು, ಆಸಕ್ತರಿಗೆ ಸಸಿ ಆರೈಕೆ ತರಬೇತಿಯನ್ನು ಕೂಡ ಉಚಿತವಾಗಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಸ್ಥಳ: ಡಾ.ಎಂ.ಎಚ್.ಮರಿಗೌಡ ಸಭಾಂಗಣ, ಲಾಲ್ ಬಾಗ್.  ಪುಷ್ಪ ಮೇಳ ಭಾನುವಾರವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.