ADVERTISEMENT

`ಸಾಹಿತ್ಯ ಕಾರ್ಯಕ್ರಮ ಸಂಘಟಿಸಿ'

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 20:06 IST
Last Updated 10 ಜೂನ್ 2013, 20:06 IST

ಮಹದೇವಪುರ: `ಸ್ಥಳೀಯ ಮಟ್ಟದಲ್ಲಿ ಪದೇಪದೇ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದರೆ ಜನರಿಗೆ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಮೂಡಲು ಸಾಧ್ಯ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಹದೇವಪುರ ಕ್ಷೇತ್ರ ಘಟಕದ ಅಧ್ಯಕ್ಷ ಟಿ.ವೀರಭದ್ರಪ್ಪ ತಿಳಿಸಿದರು.

ವೈಟ್‌ಫೀಲ್ಡ್ ಸಮೀಪದ ಹಗದೂರು ವಾರ್ಡ್ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಈಚೆಗೆ ನಡೆದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗೌರವ ಕಾರ್ಯದರ್ಶಿ ಆದಪ್ಪ ಪಾಸೋಡಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಶೋಭಾ ಕೊಂತಿಕಲ್, ವಿಶಾಲ ಆರಾಧ್ಯ, ಶ್ರೀವಲ್ಲಿ ಶೇಷಾದ್ರಿ, ನವೀನ್‌ಕುಮಾರ್, ಡಿ.ಟಿ.ಪ್ರಸನ್ನ, ನಾರಾಯಣಪ್ಪ, ವೈ.ಎಸ್.ಕೃಷ್ಣಮೂರ್ತಿ, ಎಚ್.ವಿ.ಶ್ರೀನಿವಾಸ್ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.