ADVERTISEMENT

ಸಿನಿಮಾ ಬಹಿಷ್ಕರಿಸುವುದು ಕನ್ನಡಿಗರ ಆಶಯವೇ: ಪ್ರಕಾಶ್‌ ರೈ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಜನಿಕಾಂತ್‌ ಅವರ ಹೇಳಿಕೆಯಿಂದ ನಮಗೆ ಬೇಸರ ಆಗಿರುವುದು ನಿಜ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಅವರ ‘ಕಾಲಾ’ ಚಿತ್ರವನ್ನು ಬಹಿಷ್ಕರಿಸಲು ಕೆಲವರು ನಿರ್ಧರಿಸಿದ್ದಾರೆ. ಇದು ಸಮಸ್ತ ಕನ್ನಡಿಗರ ಆಶಯವೇ? ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

‘ಸಿನಿಮಾ ಪ್ರದರ್ಶಿಸಲು ಅವಕಾಶ ಕೊಟ್ಟ ನಂತರವೂ ಜನರೇ ಅದನ್ನು ನೋಡದಿದ್ದರೆ ವಿರೋಧ ಸ್ಪಷ್ಟವಾಗುತ್ತದೆ. ಇದಕ್ಕೆ ಆಸ್ಪದ ಕೊಡದೆ ಕೆಲವರು ಮಾತ್ರ ಕನ್ನಡಿಗರಿಗೆ ಏನು ಬೇಕು, ಏನು ಬೇಡ ಎಂಬುದನ್ನು ನಿರ್ಧರಿಸುವುದು ಯಾವ ನ್ಯಾಯ? ಸಿನಿಮಾಕ್ಕಾಗಿ ನೂರಾರು ತಂತ್ರಜ್ಞರು, ಸಹಕಲಾವಿದರು, ಕಾರ್ಮಿಕರು, ಪ್ರತಿಭಾವಂತರು ದುಡಿದಿರುತ್ತಾರೆ. ನಿರ್ಮಾಪಕನ ಬಂಡವಾಳದ ಗತಿ ಏನು? ಇದರಿಂದ ಆಗುವ ದೊಂಬಿ, ಗಲಭೆಗಳಿಗೆ ಜನಸಾಮನ್ಯರೇ ಬೆಲೆ ತೆರಬೇಕಾಗಬಹುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT