ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್‌ಮೇಲೆ ಸೋಮವಾರ ದಾಳಿ ನಡೆಸಿದ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹುಕ್ಕಾ ಚಟುವಟಿಕೆ ನಡೆಯುತ್ತಿದ್ದದ್ದನ್ನು ಪತ್ತೆ ಹಚ್ಚಿದ್ದಾರೆ. ಹೊಗೆ ಸೊಪ್ಪು, ಫ್ಲೇವರ್‌ಗಳು ಮತ್ತು ಇತರೆ ಸಾಮಗ್ರಿಗಳನ್ನು ಸಿಬ್ಬಂದಿ ಜಪ್ತಿ ಮಾಡಿ ಕ್ಲಬ್‌ಗೆ ಬೀಗ ಮುದ್ರೆ ಹಾಕಿದ್ದಾರೆ.
ಅಮ್ಯೂಸ್‌ಮೆಂಟ್ ಆಫ್ ಸ್ಮೋಕಿಂಗ್ ಇನ್ ಪಬ್ಲಿಕ್ ಪ್ಲೇಸ್ ಕಾಯ್ದೆಯ (1973) ಕಲಂ 21ರ ಅನ್ವಯ ಹುಕ್ಕಾ ಸೇವನೆಗೆ ಅವಕಾಶ ನೀಡುವುದು ಕಾನೂನು ಬಾಹಿರ. ಬಿಬಿಎಂಪಿ ನೀಡಿದ್ದ ಪರವಾನಗಿಯನ್ನು ಕ್ಲಬ್ ಮಾಲೀಕರು ದುರುಪಯೋಗಪಡಿಸಿಕೊಂಡಿದ್ದು, ಈ ಕ್ಲಬ್‌ಗೆ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದರು.
ಸ್ನೂಕರ್ ಆಡುತ್ತಿದ್ದವರು ಹುಕ್ಕಾ ಸೇದುತ್ತಿದ್ದರು ಎಂದು ಪಾಲಿಕೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.