ADVERTISEMENT

ಹಕ್ಕಿ ಜ್ವರ: 15ರವರೆಗೆ ಶಾಲೆ ಮುಚ್ಚಲು ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:15 IST
Last Updated 5 ನವೆಂಬರ್ 2012, 19:15 IST

ಬೆಂಗಳೂರು: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಹೆಸರಘಟ್ಟ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ (ಸಿಡಿಪಿಒ) ಆವರಣದಲ್ಲಿರುವ ಜ್ಯೋತಿ ವಿದ್ಯಾಲಯವನ್ನು ಇದೇ 15ರ ವರೆಗೆ ಮುಚ್ಚಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಸೋಮವಾರ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ಹಕ್ಕಿಗಳು ಹಕ್ಕಿಜ್ವರದ ಕಾರಣದಿಂದ ಮೃತಪಟ್ಟಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಕ್ಕಿ ಜ್ವರ ಅಲ್ಲ: `ಹೆಸರಘಟ್ಟದ ಸಮೀಪದ ವಿನಾಯಕನಗರದಲ್ಲಿ ಮಂಜಮ್ಮ ಎಂಬವರ 12 ಕೋಳಿಗಳು ಶನಿವಾರ ಹಾಗೂ ಭಾನುವಾರ ಮೃತಪಟ್ಟಿದ್ದವು. ಮಾದರಿಯನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು, ಹಕ್ಕಿ ಜ್ವರ ಅಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ~ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಮಂಜಮ್ಮ ಅವರ ಮನೆಯಲ್ಲಿ ಸೋಮವಾರ ಮತ್ತೆ ಐದು ಕೋಳಿಗಳು ಮೃತಪಟ್ಟಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.