ADVERTISEMENT

ಹಿರಣ್ಣಯ್ಯ,ರಂಗನಾಥರಾವ್ ಆಯ್ಕೆ

ಅ.ನ.ಕೃ-ನಿರ್ಮಾಣ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಬೆಂಗಳೂರು: ಹೆಸರಾಂತ ಸಾಹಿತಿ ದಿ. ಅ.ನ.ಕೃಷ್ಣರಾಯರ ನೆನಪಿನಲ್ಲಿ ಬೆಂಗಳೂರಿನ ಅ.ನ.ಕೃ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ಅ.ನ.ಕೃ-ನಿರ್ಮಾಣ್ 2013ರ ಸ್ವರ್ಣ ಪ್ರಶಸ್ತಿಗೆ ಹಾಸ್ಯನಟ ಮಾಸ್ಟರ್ ಹಿರಣ್ಣಯ್ಯ ಮತ್ತು ಹಿರಿಯ ಪತ್ರಕರ್ತರಾದ ಜಿ.ಎನ್. ರಂಗನಾಥರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಎಲ್.ಎಸ್. ಶೇಷಗಿರಿರಾವ್, ಶಾ.ಮಂ. ಕೃಷ್ಣರಾಯ, ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ವಿ. ಲಕ್ಷ್ಮೀನಾರಾಯಣ್ ಹಾಗೂ ಕಾರ್ಯದರ್ಶಿಗಳಾದ ಎ.ಕೆ. ಗೌತಮ್ ಇದ್ದರು.

ಪ್ರಶಸ್ತಿಯು ಸ್ವರ್ಣಫಲಕ, ಅಭಿನಂದನಾ ಪತ್ರ ಮತ್ತು 1,00,001 ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಜುಲೈ ತಿಂಗಳಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT