ADVERTISEMENT

ಹೊಸಕೋಟೆ: ಅರಸು ರಥಯಾತ್ರೆಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:30 IST
Last Updated 18 ಆಗಸ್ಟ್ 2016, 19:30 IST
ಡಿ.ದೇವರಾಜು ಅರಸು ಅವರ ಸ್ತಬ್ಧ ಚಿತ್ರಗಳನ್ನು ಹೊತ್ತ ರಥಯಾತ್ರೆಗೆ ಹೊಸಕೋಟೆಯಲ್ಲಿ ಪೂರ್ಣ ಕುಂಭದ ಸ್ವಾಗತ ನೀಡಲಾಯಿತು
ಡಿ.ದೇವರಾಜು ಅರಸು ಅವರ ಸ್ತಬ್ಧ ಚಿತ್ರಗಳನ್ನು ಹೊತ್ತ ರಥಯಾತ್ರೆಗೆ ಹೊಸಕೋಟೆಯಲ್ಲಿ ಪೂರ್ಣ ಕುಂಭದ ಸ್ವಾಗತ ನೀಡಲಾಯಿತು   

ಹೊಸಕೋಟೆ: ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ  ಕೋಲಾರ ಜಿಲ್ಲೆಯ ಮಾಲೂರಿನಿಂದ ಗುರುವಾರ ಪಟ್ಟಣಕ್ಕೆ ಬಂದ ಅರಸು ಅವರ ರಥಯಾತ್ರೆಗೆ ಪೂರ್ಣಕುಂಭದ ಸ್ವಾಗತ ನೀಡಲಾಯಿತು.

ತಾಲ್ಲೂಕಿನ ಗಡಿ ಭಾಗವಾದ ಕಟ್ಟಿಗೇನಹಳ್ಳಿ ಬಳಿ ಶಾಸಕ ಎನ್.ನಾಗರಾಜು, ಜಿಲ್ಲಾಧಿಕಾರಿ ಎಸ್.ಪಾಲಯ್ಯ ರಥವನ್ನು ಬರ ಮಾಡಿಕೊಂಡರು.
ಜನಪದ ಕಲಾ ತಂಡಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ರಥವನ್ನು ತಾಲ್ಲೂಕು ಕಚೇರಿ ಆವರಣಕ್ಕೆ ತರಲಾಯಿತು.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎನ್.ನಾಗರಾಜು ಅರಸು ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಧೀಮಂತ ನಾಯಕ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.