ADVERTISEMENT

ಹೋಂಡಾದಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:56 IST
Last Updated 7 ಫೆಬ್ರುವರಿ 2019, 18:56 IST
ರಸ್ತೆ ದಾಟುವಾಗ ಮತ್ತು ಬಸ್‌ ಹತ್ತುವಾಗ ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶಗಳನ್ನು ಹೋಂಡಾ ಕಂಪನಿಯ ಪ್ರತಿನಿಧಿ ಮಕ್ಕಳಿಗೆ ಹೇಳಿಕೊಟ್ಟರು
ರಸ್ತೆ ದಾಟುವಾಗ ಮತ್ತು ಬಸ್‌ ಹತ್ತುವಾಗ ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶಗಳನ್ನು ಹೋಂಡಾ ಕಂಪನಿಯ ಪ್ರತಿನಿಧಿ ಮಕ್ಕಳಿಗೆ ಹೇಳಿಕೊಟ್ಟರು   

ಬೆಂಗಳೂರು: ಸಂಚಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಹೋಂಡಾ ಮೋಟರ್‌ ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾ ಪ್ರೈವೇಟ್‌ ಕಂಪನಿಯು ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ–2019’ರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ‘ಸಡಕ್‌ ಸುರಕ್ಷಾ, ಜೀವನ್‌ ರಕ್ಷಾ’ ಎಂಬ ಘೋಷವಾಕ್ಯದೊಂದಿಗೆ, ‘ಹೆಲ್ಮೆಟ್‌ ಆನ್‌ ಲೈಫ್‌ ಆನ್‌’ ಎಂಬ ಸಂದೇಶವನ್ನು ಸವಾರರಿಗೆ ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶಾಲಾ ಮಕ್ಕಳು ಮತ್ತು ಬಸ್‌ ಚಾಲಕರು ಸಂಚಾರದ ವೇಳೆ ಅನುಸರಿಸಬೇಕಾದ ನಿಯಮಗಳ ಅರಿವು ಮೂಡಿಸುತ್ತಿದೆ. ಸುರಕ್ಷತಾ ಸೈಕಲ್‌ ಸವಾರಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಿದೆ. ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದವರಿಗೆ ಟ್ರಾಫಿಕ್‌ ಟ್ರೈನಿಂಗ್ ಪಾರ್ಕ್‌ಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದೆ.

ADVERTISEMENT

ಈ ಅಭಿಯಾನದಲ್ಲಿ ಹೋಂಡಾ ಕಂಪನಿಯ 986 ಡೀಲರ್‌ಗಳು, 4 ಉತ್ಪಾದನಾ ಘಟಕಗಳು, 16 ವಿಭಾಗಿಯ ಕಚೇರಿಗಳು, 5 ವಲಯ ಕಚೇರಿ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

‘ನಮ್ಮ ಹೋಂಡಾ ಬಳಕೆದಾರರು ಸೇರಿದಂತೆ, ಲಕ್ಷಾಂತರ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಟ್ರಾಫಿಕ್‌ ಟ್ರೈನಿಂಗ್ ಪಾರ್ಕ್‌ಗಳಲ್ಲಿ ಹಲವಾರು ತರಬೇತಿಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಹೋಂಡಾ ಕಂಪನಿಯ ಬ್ರಾಂಡ್‌ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರಭು ನಾಗರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.