ADVERTISEMENT

‘ಕನ್ನಡಿಗರು ಸ್ವಾಭಿಮಾನ ಬೆಳೆಸಿಕೊಳ್ಳಿ’

ನೆಲಮಂಗಲ ತಾಲ್ಲೂಕು ಏಳನೇ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:59 IST
Last Updated 1 ಮಾರ್ಚ್ 2014, 19:59 IST

ನೆಲಮಂಗಲ: ಕನ್ನಡದ ಹಿತಕ್ಕೆ ಧಕ್ಕೆ­ಯಾ­ದರೆ ಸಿಡಿದೇಳುವಷ್ಟು ಸ್ವಾಭಿ­ಮಾನ­­ವನ್ನು ಕನ್ನಡಿಗರು ಬೆಳೆಸಿಕೊಳ್ಳ­ಬೇಕು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷ ನೆ.ವಿಶ್ವನಾಥ್‌ ಸಲಹೆ ನೀಡಿದರು.

ಬಸವಣ್ಣ ದೇವರ ಮಠದಲ್ಲಿ ಏರ್ಪಡಿಸಿದ್ದ 7ನೇಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಭಾಷಿಕರ ದುರಾಭಿಮಾನ­ವನ್ನು ಸಹಿಸಿಕೊಳ್ಳುವ ಧೋರಣೆ­ಯನ್ನು  ಇನ್ನಾ­ದರೂ ಬಿಡಬೇಕು ಎಂದು ಹೇಳಿದರು. ‘ನೆಲಮಲ್ಲಿಗೆ’ ಸ್ಮರಣ ಸಂಚಿಕೆ­­ಯನ್ನು  ಶಾಸಕ ಡಾ.ಕೆ.­ಶ್ರೀನಿ­ವಾಸ­­­ಮೂರ್ತಿ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.