ADVERTISEMENT

ಬೆಂಗಳೂರು ನಗರದಲ್ಲಿ ಭದ್ರತೆ: ಪೊಲೀಸರ ವಾರದ ರಜೆಗೂ ಕತ್ತರಿ?

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:45 IST
Last Updated 18 ಆಗಸ್ಟ್ 2019, 19:45 IST
   

ಬೆಂಗಳೂರು: ನಗರದಲ್ಲಿಯ ಭದ್ರತೆ ನೆಪವೊಡ್ಡಿ ಪೊಲೀಸ್‌ ಸಿಬ್ಬಂದಿಗೆ ಇದೇ 19ರಿಂದ ಅನ್ವಯವಾಗುವಂತೆ ವಾರದ ರಜೆ ಸೇರಿದಂತೆ ಯಾವುದೇ ರಜೆ ನೀಡದಿರಲು ನಿರ್ಧರಿಸಲಾಗಿದೆ.

ಕೋರಮಂಗಲ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ಎಸ್. ಮಂಜುನಾಥ್‌ ಈ ಸಂಬಂಧ ತಮ್ಮ ಠಾಣೆಯ ಸಿಬ್ಬಂದಿಗೆ ಸಂಬಂಧಪಟ್ಟಂತೆ ಭಾನುವಾರ ‘ಜ್ಞಾಪನಾ ಸೂಚನೆ’ ಹೊರಡಿಸಿದ್ದಾರೆ.

‘ಈಗಾಗಲೇ ನಗರದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮುಂಬರುವ ಗೌರಿ ಗಣೇಶ ಹಬ್ಬ ಸಂಬಂಧಪಟ್ಟಂತೆ ಸೂಕ್ತ ಬಂದೋಬಸ್ತ್‌ ಮಾಡಿಕೊಳ್ಳಬೇಕಿದೆ. ಹೀಗಾಗಿ, ರಜೆ ನೀಡಲು ಆಗುತ್ತಿಲ್ಲ’ ಎಂದು ತಿಳಿಸಲಾಗಿದೆ.

ADVERTISEMENT

‘ಇದು, ಏಕಪಕ್ಷೀಯ ನಿರ್ಧಾರ. ಸಾಂದರ್ಭಿಕ ರಜೆ ಇಲ್ಲದಿದ್ದರೂ ಪರವಾಗಿಲ್ಲ. ವಾರದ ರಜೆ ಅಗತ್ಯ’ ಎಂದು ಕೆಲ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.