ADVERTISEMENT

12 ಮಂದಿಗೆ ‘ಅಂತರರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:14 IST
Last Updated 14 ಸೆಪ್ಟೆಂಬರ್ 2024, 15:14 IST
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ   

ಬೆಂಗಳೂರು: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ನೀಡುವ 2024ನೇ ಸಾಲಿನ ‘ಅಂತರರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ’ಗೆ 12 ಮಂದಿ ಆಯ್ಕೆಯಾಗಿದ್ದಾರೆ

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಉಮೇಶ್, ‘ಪ್ರಶಸ್ತಿಗೆ ಆರತಿ ಕೃಷ್ಣ, ಅಂಜು ಬಾಬಿ ಜಾರ್ಜ್, ರೆಬೆಕಾ ಟೇಲರ್, ಆರತಿ, ಪ್ರೇಮಾ, ಸೌಮ್ಯಾ ರೆಡ್ಡಿ, ಸುಧಾ, ಪ್ರಿಯಾ ಕೆರ್ವಾಶೆ, ದೀಪ್ತಿ ತೋಳ್ಪಾಡಿ, ಗೌರಿ, ಪೃಥ್ವಿ ವೊಕುಡ ಹಾಗೂ ಕಸ್ತೂರಿ ಶಂಕರ್ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು. 

‘ಅ.26ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.