ADVERTISEMENT

ಬಿಬಿಎಂಪಿ ವ್ಯಾಪ್ತಿಯ ಗ್ರಂಥಾಲಯಗಳಿಗೆ ₹121 ಕೋಟಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 20:53 IST
Last Updated 28 ಫೆಬ್ರುವರಿ 2023, 20:53 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಗ್ರಂಥಾಲಯಗಳಿಗೆ 2023–24ನೇ ಸಾಲಿನ ವೆಚ್ಚಗಳಿಗೆ ₹121.18 ಕೋಟಿ ಅನುಮೋದನೆ ನೀಡಲಾಗಿದೆ.

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಗ್ರಂಥಾಲಯ ಪ್ರಾಧಿಕಾರದ ಐದು ವಲಯಗಳ ಆಯವ್ಯಯ ಸಭೆಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಯಿತು.

ಕಿದ್ವಾಯಿ ಆವರಣ, ಬಾಲಭವನದ ಹೊಸ ಆಡಿಟೋರಿಯಂನಲ್ಲಿ ಹೊಸ ಗ್ರಂಥಾಲಯ ಸ್ಥಾಪಿಸಲು ಸಭೆಯಲ್ಲಿ ಸೂಚಿಸಲಾಯಿತು. ಹೊಸ ಕಟ್ಟಡ ನಿರ್ಮಿಸಲು ಸ್ವಂತ ಆದಾಯ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಯಿತು.

ADVERTISEMENT

ಪಶ್ಚಿಮವಲಯದಲ್ಲಿ ಡಾ. ವಿಷ್ಣುವರ್ಧನ್ ಸಭಾಂಗಣವಿದ್ದು, ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಪ್ರತಿವಾರ 2 ದಿನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಬೇಕು. ಪ್ರತಿ ವಲಯಕ್ಕೆ ಒಂದು ಮೊಬೈಲ್‌ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲು ವ್ಯಾನ್‌ ಖರೀದಿ, ಮಕ್ಕಳ ಪ್ರತಿಭೆ ಗುರುತಿಸಲು ‘ಮೇಕರ್ಸ್‌ ಸ್ಪೇಸ್‌’ ಯೋಜನೆ ಜಾರಿ, ಗ್ರಂಥಾಲಯಗಳ ಸ್ವಚ್ಛತಾ ಸಿಬ್ಬಂದಿ, ಸಹಾಯಕರಿಗೆ ಕನಿಷ್ಠ ವೇತನ ಪಾವತಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಿಬಿಎಂಪಿ ವತಿಯಿಂದ ಗ್ರಂಥಾಲಯ ಇಲಾಖೆಗೆ ಸೆಸ್‌ ಮೊತ್ತ ಪಾವತಿಸಲು ಎಸ್ಕ್ರೋ ಖಾತೆ ತೆರೆಯಲು ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.