ADVERTISEMENT

ಚೆನ್ನೈನಲ್ಲಿ ಯೂತ್‌ ವಾಲಂಟಿಯರ್ಸ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:01 IST
Last Updated 14 ಫೆಬ್ರುವರಿ 2020, 19:01 IST

ಬೆಂಗಳೂರು: ‘ಯೂತ್‌ ವಾಲಂಟಿಯರ್ಸ್‌’ ಸಮಾವೇಶವುಫೆಬ್ರವರಿ 10ರಿಂದ 14ರ ವರೆಗೆ ನಡೆಯಿತು. ಭಾರತದ ಮೂಲೆಮೂಲೆಗಳಿಂದ ಆಯ್ದ 33 ಯುವ ನೇತಾರರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನುಚೆನ್ನೈನಲ್ಲಿನ ಅಮೆರಿಕದ ರಾಯಭಾರ ಕಚೇರಿ,ಅಮೆರಿಕ ಮೂಲದ ಟ್ರಾನ್ಸ್‌ಫಾರ್ಮೇಷನಲ್‌ ಸ್ಪೋರ್ಟ್ಸ್ ಮತ್ತು ಕಾಟ್ರಾಡಿ ಸಂಸ್ಥೆಗಳ ಸಹಯೋಗದಲ್ಲಿ ಚೆನ್ನೈನ ಮಣಪಾಕ್ಕಂನ ಪರಿಪೂರ್ಣ ತರಬೇತಿ ಕೇಂದ್ರದಲ್ಲಿ ನಡೆಯಿತು.

ಲಿಂಗ ಸಮಾನತೆ,ಸಾರ್ವಜನಿಕ ಆರೋಗ್ಯ ಅರಿವು,ಪರಿಸರ ಸಂರಕ್ಷಣೆ ಮತ್ತು ವಿಪತ್ತು ಪರಿಹಾರ ವಿಷಯಗಳಲ್ಲಿ ಸಮುದಾಯಗಳಿಗೆ ನೆರವು ನೀಡುವ ಸಲುವಾಗಿ ‘ಆಲ್‌ ಇಂಡಿಯಾ ಯೂತ್‌ ವಾಲೆಂಟಿಯರ್‌ ನೆಟ್‌ವರ್ಕ್‌’ಗೆ ಇಲ್ಲಿ ಚಾಲನೆ ನೀಡಲಾಯಿತು.

ADVERTISEMENT

‘ಇಂದು ಭಾರತದ ಮುಂದಿರುವ ಸವಾಲುಗಳು ಎದುರಿಸಲು ಯುವಕರನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಬಗ್ಗೆ ಸಮಾವೇಶದಲ್ಲಿವ್ಯಾಪಕ ಚರ್ಚೆ ನಡೆಯಿತು’ ಎಂದು ಟ್ರಾನ್ಸ್‌ಫಾರ್ಮೇಷನಲ್‌ ಸ್ಫೋರ್ಟ್ಸ್‌ ಡೈರೆಕ್ಟರ್‌ ಎಲಿಜಬೆತ್‌ ಹೆಯ್ನ್ಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.