ADVERTISEMENT

256 ಪ್ರಕರಣಗಳ ಪತ್ತೆ: 135 ಜನರ ಬಂಧನ

ದಕ್ಷಿಣ ವಿಭಾಗದ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ನಗರದಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆದ ದರೋಡೆ, ಸುಲಿಗೆ, ಕಳ್ಳತನ ಸೇರಿದಂತೆ 256 ಅಪರಾಧ ಪ್ರಕರಣಗಳನ್ನು ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು, 135 ಆರೋಪಿಗಳನ್ನು ಬಂಧಿಸಿ, ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌, ‘ದಕ್ಷಿಣ ವಿಭಾಗದ 17 ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಅಪ ರಾಧ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 57 ಮನೆಗಳವು, 126 ವಾಹನ ಕಳವು, 10 ಸರಗಳವು ಹಾಗೂ ಏಳು ಸುಲಿಗೆ ಪ್ರಕರಣಗಳನ್ನು ಭೇದಿಸಲಾಗಿದೆ’ ಎಂದರು.

‘ಬಂಧಿತ ಆರೋಪಿಗಳಿಂದ ₨ 4.75 ಲಕ್ಷ ನಗದು, ಏಳು ಕೆ.ಜಿ. ಚಿನ್ನ, ಮೂರು ಕೆ.ಜಿ. ಬೆಳ್ಳಿ, 115 ಬೈಕ್‌ಗಳು ಹಾಗೂ 11 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ಹೆಚ್ಚುವರಿ ಗೃಹ ರಕ್ಷಕರ ನೇಮಕ: ‘ನಗರದಲ್ಲಿ ರೆಸ್ಟೋ ರೆಂಟ್‌ ಹಾಗೂ ಹೋಟೆಲ್‌ಗಳ ಅವಧಿಯನ್ನು ರಾತ್ರಿ 1 ಗಂಟೆಯವರೆಗೆ ವಿಸ್ತರಿಸಿರುವುದರಿಂದ ಭದ್ರತೆಗೆ ಪೊಲೀಸ ರೊಂದಿಗೆ ಗೃಹ ರಕ್ಷಕರ ಸೇವೆ ಅಗತ್ಯವಾಗಿದೆ. ಇದಕ್ಕಾಗಿ ಹೆಚ್ಚು ವರಿಯಾಗಿ ಗೃಹ ರಕ್ಷಕರನ್ನು ನೇಮಿಸಿಕೊ ಳ್ಳಲಾಗುವುದು’ ಎಂದು ರಾಜ್ಯ ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಡಿಜಿಪಿ ಓಂಪ್ರಕಾಶ್‌ ತಿಳಿಸಿದರು.

‘ಈಗಾಗಲೇ ನಗರಕ್ಕೆ ಒಂದು ಸಾವಿರ ಗೃಹ ರಕ್ಷಕರನ್ನು ನೇಮಿಸಿಕೊಳ್ಳಲಾ ಗಿದೆ. ಶೀಘ್ರವೇ ಇನ್ನಷ್ಟು ಗೃಹ ರಕ್ಷಕರನ್ನು ನೇಮಿಸಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.