ADVERTISEMENT

30 ರೂಫ್‌ಟಾಪ್‌ ಪಬ್‌ ಮುಚ್ಚಲು ಬಿಬಿಎಂಪಿ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:48 IST
Last Updated 6 ಮಾರ್ಚ್ 2018, 19:48 IST

ಬೆಂಗಳೂರು: ಸುರಕ್ಷತಾ ನಿಯಮಗಳನ್ನು ಪಾಲಿಸದ ರೂಫ್‌ಟಾಪ್ ಪಬ್‌ಗಳು ಮತ್ತು ರೆಸ್ಟೊರೆಂಟ್‌ಗಳನ್ನು ಮುಚ್ಚುವಂತೆ ಸೂಚಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ರೂಫ್‌ಟಾಪ್‌ನಲ್ಲಿ ಕಾರ್ಯಾಚರಿಸುತ್ತಿರುವ 30 ಪಬ್‌ಗಳು ಮತ್ತು ರೆಸ್ಟೊರೆಂಟ್‌ಗಳು ಸುರಕ್ಷತಾ ನಿಯಮ ಪಾಲಿಸುತ್ತಿಲ್ಲ. ಅವುಗಳ ವ್ಯಾಪಾರ ಪರವಾನಗಿ ರದ್ದುಪಡಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳ (ಕೆಎಸ್‌ಎಫ್‌ಇಎಸ್‌) ಇಲಾಖೆಯು ಕಳೆದ ವಾರ ಬಿಬಿಎಂಪಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಪಾಲಿಕೆ ಕ್ರಮ ಕೈಗೊಂಡಿದೆ.

ಕೆಎಸ್‌ಎಫ್‌ಇಎಸ್‌ನ ಐಜಿಪಿ ಸೌಮ್ಯೇಂದು ಮುಖರ್ಜಿ, ‘ಇವುಗಳ ಮಾಲೀಕರಿಗೆ 2-3 ಬಾರಿ ನೋಟಿಸ್‌ ನೀಡಿದ್ದೆವು. ಆ ಬಳಿಕವೂ ಅವರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜನರ ಜೀವದ ಜೊತೆ ಅವರು ಆಟವಾಡುತ್ತಿದ್ದಾರೆ. ಹಾಗಾಗಿ ಪರವಾನಗಿ ರದ್ದುಪಡಿಸುವಂತೆ ಬಿಬಿಎಂಪಿಯನ್ನು ಕೋರಿದ್ದೆವು. ಅವುಗಳ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸುವಂತೆ ಬೆಸ್ಕಾಂಗೂ ಪತ್ರ ಬರೆದಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಬಿಬಿಎಂಪಿ  ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ‘ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಈ ಮಳಿಗೆಗಳ ವ್ಯಾಪಾರ ಪರವಾನಗಿ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಿದ್ದೇನೆ’ ಎಂದರು.

ಸುರಕ್ಷತಾ ನಿಯಮ ಪಾಲಿಸದ ರೂಫ್‌ಟಾಪ್‌ ಪಬ್‌/ರೆಸ್ಟೊರೆಂಟ್‌ಗಳು

ಇಂದಿರಾನಗರ: ಹಮ್ಮಿಂಗ್‌ ಟ್ರೀ, ಎಸ್ಕೇಪ್‌ ಹೋಟೆಲ್‌, ಬಿ–ಫ್ಲ್ಯಾಟ್‌, ದ ಬ್ಲ್ಯಾಕ್‌ ರ‍್ಯಾಬಿಟ್‌ ಪಬ್‌, ಗೂಫೀಸ್‌ ಪಬ್‌

ದೊಮ್ಮಲೂರು: ಲವ್‌ ಶಾಕ್‌, ನೈಟ್‌ ರೈಡರ್ಸ್‌ ಆ್ಯಂಡ್‌ ಲಿಯೊ ಸ್ಯೂಟ್ಸ್‌

ಕೋರಮಂಗಲ: ಬಾರ್ಲೇಝ್‌

ಚರ್ಚ್‌ಸ್ಟ್ರಿಟ್‌: ಚರ್ಚ್ಸ್‌ ಇನ್‌

ಕೆ.ಎಚ್‌.ಡಬಲ್‌ ರಸ್ತೆ: ಹೋಟೆಲ್‌ ಸಬರ್‌ವಾಲ್‌ ರೆಸಿಡೆನ್ಸಿ

ಶಾಂತಿನಗರ: ಸ್ಕೈಲೈನ್‌ ರೆಸ್ಟೊರೆಂಟ್‌

ಜಯನಗರ 5ನೇ ಬ್ಲಾಕ್‌: ಬಾರನ್ಸ್‌ ಇನ್‌

ಜೆ.ಪಿ.ನಗರ, 5ನೇ ಹಂತ: ಬಾಟ್ಲ್‌ ಬ್ರೀಚರ್‌

ಜೆ.ಪಿ,ನಗರ 8ನೇ ಹಂತ: ಶ್ರಾವಣ್ಯ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌

ವರ್ತುಲ ರಸ್ತೆ 2ನೇ ಹಂತ: ಬ್ರೂವ್‌ ಸ್ಕೈ ಬಾರ್‌ ಆ್ಯಂಡ್‌ ‍ಪಬ್‌

ಜೆ.ಪಿ.ನಗರ 1ನೇ ಹಂತ: ಸ್ಟೋರೀಸ್‌ ಬಾರ್‌ ಪಬ್‌ ಆ್ಯಂಡ್‌ ರೆಸ್ಟೊರೆಂಟ್‌

ಜಯನಗರ 3ನೇ ಬ್ಲಾಕ್‌: ಗುಫಾ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌

ವೈಟ್‌‍ಫೀಲ್ಡ್‌: ಪಂಜಾಬಿ

ಮುನ್ನೇನಕೊಳಲು: ಭಗಿನಿ ಬಾರ್‌

ರೆಸಿಡೆನ್ಸಿ ರಸ್ತೆ: ಮಹೇಶ್‌ ಲಂಚ್‌ ಹೋಮ್‌

ಕುಂದಲಹಳ್ಳಿ ಗೇಟ್‌: ಭಗಿನಿ ಐಕಾನ್‌ ಬ್ಯುಸಿನೆಸ್‌ ಹೋಟೆಲ್‌

ಮಿನರ್ವ ವೃತ್ತ: ಹೋಟೆಲ್‌ ಸಬರ್‌ವಾಲ್‌ ವೈಸ್‌ರಾಯ್‌

ಆರ್‌ಬಿಐ ಬಡಾವಣೆ: ಲಿಕ್ಕರ್‌ ಮಾರ್ಟ್‌

ಮತ್ತಿಕೆರೆ: ಸ್ಮೋಕೀಸ್

ರಾಜಾಜಿನಗರ: ಅಭಿಮಾನಿ ವಸತಿ

ಹೆಬ್ಬಾಳ: ರಾಯಲ್‌ ಸೊನಾಟೆ

ನಾಗವಾರ: ಝೈಕಾ ರೆಸ್ಟೊರೆಂಟ್‌

ಬಾಣಸವಾಡಿ: ದಿವಾಕರ್‌ ಬಾರ್‌ ಆ್ಯಂಡ್‌ ರೋಟಿ ಲ್ಯಾಂಡ್‌

ಕಲ್ಯಾಣ ನಗರ: ಬಾಟಮ್ಸ್‌ ಅಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.