ಡೆಂಗಿ ಪ್ರಕರಣ ( ಸಾಂಕೇತಿಕ ಚಿತ್ರ)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 296 ಸೇರಿ ರಾಜ್ಯದಲ್ಲಿ 486 ಡೆಂಗಿ ಪ್ರಕರಣಗಳು ಹೊಸದಾಗಿ ಶನಿವಾರ ದೃಢಪಟ್ಟಿವೆ.
24 ಗಂಟೆಗಳ ಅವಧಿಯಲ್ಲಿ 3,579 ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ ಜ್ವರಪೀಡಿತರಾದವರಲ್ಲಿ ಒಂದು ವರ್ಷದೊಳಗಿನ 14 ಮಕ್ಕಳೂ ಸೇರಿದ್ದಾರೆ. ಸದ್ಯ 3,404 ಡೆಂಗಿ ಸಕ್ರಿಯ ಪ್ರಕರಣಗಳಿದ್ದು, 2,923 ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. 15 ಮಂದಿ ಐಸಿಯು ಸೇರಿ 481 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.
20 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ದೃಢಪಟ್ಟಿವೆ. ಹಾಸನದಲ್ಲಿ 45, ಧಾರವಾಡದಲ್ಲಿ 23, ದಾವಣಗೆರೆಯಲ್ಲಿ 20, ಬೀದರ್‌ನಲ್ಲಿ 16, ಮಂಡ್ಯ ಹಾಗೂ ಹಾವೇರಿಯಲ್ಲಿ ತಲಾ 13, ಕಲಬುರಗಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ತಲಾ 11 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ.
ರಾಜ್ಯದಲ್ಲಿ ಈವರೆಗೆ ಡೆಂಗಿ ಶಂಕೆ ಕಾರಣ 94,663 ಮಂದಿಗೆ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಗಳಿಂದ 13,754 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.