ADVERTISEMENT

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 14ರಿಂದ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:28 IST
Last Updated 9 ಜನವರಿ 2018, 19:28 IST

ಬೆಂಗಳೂರು: 2018ನೇ ಸಾಲಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಇದೇ 14 ರಿಂದ 21 ರವರೆಗೆ ಮೈಸೂರಿನಲ್ಲಿರುವ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಲಸೆ ಶೀರ್ಷಿಕೆಯಡಿಯಲ್ಲಿ ನಾಟಕೋತ್ಸವ ಆಯೋಜಿಸಿದ್ದೇವೆ. ಸಂಜೆ 5.30ಕ್ಕೆ ಸಾಹಿತಿ ಡಾ. ಗಿರೀಶ್ ಕಾರ್ನಾಡ ಚಾಲನೆ ನೀಡಲಿದ್ದಾರೆ. ದೇಶದ ಅನ್ಯ ಭಾಷೆಗಳ 9 ನಾಟಕಗಳು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಂಡಗಳಿಂದ 9 ಕನ್ನಡ ನಾಟಕಗಳು, 6 ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದರು.

14ರಂದೇ ಆರಂಭವಾಗುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿ ದಿನ ಮೂರು ಚಲನಚಿತ್ರಗಳಂತೆ ಬೇರೆ ಭಾಷೆಗಳ 24 ಚಲನಚಿತ್ರಗಳು ಹಾಗೂ ಸಾಕ್ಷಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ 20 ಮತ್ತು 21ರಂದು ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದ್ದು, ದೇಶದ ಹಲವು ಚಿಂತಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.