ADVERTISEMENT

ಮುಷ್ಕರ ಹಿಂಪಡೆದ ಗುತ್ತಿಗೆದಾರರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:45 IST
Last Updated 10 ಜನವರಿ 2018, 19:45 IST

ಬೆಂಗಳೂರು: ಸೇವಾ ತೆರಿಗೆ ರದ್ದುಪಡಿಸುವಂತೆ ಒತ್ತಾಯಿಸಿ ಗುರುವಾರದಿಂದ ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ಬಿಬಿಎಂಪಿಯ ಕಸ ವಿಲೇವಾರಿ ಗುತ್ತಿಗೆದಾರರು ಹಿಂಪಡೆದಿದ್ದಾರೆ.

₹100 ಕೋಟಿ ಬಾಕಿ ಸೇವಾ ತೆರಿಗೆ ಪಾವತಿಸುವಂತೆ ವಾಣಿಜ್ಯ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದರು. ಅದನ್ನು ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗದಿದ್ದರಿಂದ ಗುತ್ತಿಗೆದಾರರು ಮುಷ್ಕರ ನಡೆಸಲು ತೀರ್ಮಾನಿಸಿದ್ದರು.

ಗುತ್ತಿಗೆದಾರರ ಜತೆ ಬುಧವಾರ ಸಂಜೆ ಸಂಧಾನ ಸಭೆ ನಡೆಸಿ ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, 'ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ. ಇಲಾಖೆ ಒಪ್ಪದಿದ್ದರೆ ಆ ಮೊತ್ತವನ್ನು ಪಾಲಿಕೆಯಿಂದಲೇ ಪಾವತಿಸುತ್ತೇವೆ’ ಎಂದು ಭರವಸೆ ನೀಡಿದರು. ಅದಕ್ಕೆ ಒಪ್ಪಿದ ಗುತ್ತಿಗೆದಾರರು, ಮುಷ್ಕರ ಕೈಬಿಡುವುದಾಗಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.