ADVERTISEMENT

ಹುಲ್ಲಿನ ಬಣವೆಗೆ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:23 IST
Last Updated 5 ಫೆಬ್ರುವರಿ 2018, 19:23 IST

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಇಮಚೇನಹಳ್ಳಿಯ ರೈತ ವೆಂಕಟಪ್ಪ ಎಂಬುವವರಿಗೆ ಸೇರಿದ ರಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಅವರ ಮನೆಯ ಹಿತ್ತಲಲ್ಲಿ ಬಣವೆಯನ್ನು ಹಾಕಲಾಗಿತ್ತು. ಮಧ್ಯಾಹ್ನ ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಾಕಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

‘ಕೆಲವು ದಿನಗಳ ಹಿಂದೆ ನನ್ನದೇ ಹೊಲದ ಹುಲ್ಲಿನ ಬಣವೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಮೇವಿಗೆ ಹುಲ್ಲು ಇಲ್ಲವೆಂದು ಬೇರೆಡೆಯಿಂದ ಸುಮಾರು 80 ಹೊರೆಯಷ್ಟು ಹುಲ್ಲು ಖರೀದಿಸಿದ್ದೆ. ಅದಕ್ಕೂ ಬೆಂಕಿಯಿಟ್ಟಿದ್ದಾರೆ’ ಎಂದು ವೆಂಕಟಪ್ಪ ಅಳಲು ತೋಡಿಕೊಂಡರು.

ADVERTISEMENT

‘ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಅನ್ಯಾಯಕ್ಕೊಳಗದ ರೈತನಿಗೆ ಸರ್ಕಾರದಿಂದ ಸಿಗುವ ಸಹಾಯ ಒದಗಿಸಬೇಕು’ ಎಂದು ಸ್ಥಳೀಯ ರಮೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.