ADVERTISEMENT

ವಿಡಿಯೊ ವೈರಲ್ ಮಾಡಿದವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

ಬೆಂಗಳೂರು: ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (18) ಆತ್ಮಹತ್ಯೆ ಪ್ರಕರಣ ಸಂಬಂಧ ವೈರಲ್ ಆಗಿದ್ದ ವಿಡಿಯೊ ಹರಿಬಿಟ್ಟ ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.

ಮೇಘನಾ ಜತೆ ಎದುರಾಳಿ ಗುಂಪಿನ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದ ವಿಡಿಯೊ ಗುರುವಾರ ಬಹಿರಂಗವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಅದು ಹೆಚ್ಚಾಗಿ ಹರಿದಾಡಿತ್ತು. ಆ ಸಂಬಂಧ ಮೇಘನಾಳ ಆಪ್ತ ಗೆಳೆತಿಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ವಿಡಿಯೊ ಚಿತ್ರೀಕರಿಸಿದ್ದ ಸಹಪಾಠಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

‘ತರಗತಿ ಪ್ರತಿನಿಧಿ ಆಯ್ಕೆ ವಿಚಾರವಾಗಿ ಮೇಘನಾ ವಿರುದ್ಧ ಎದುರಾಳಿ ಗುಂಪು ಅಸಮಾಧಾನಗೊಂಡಿತ್ತು. ಅದೇ ವಿಚಾರಕ್ಕೆ ಗಲಾಟೆಯೂ ನಡೆದಿತ್ತು. ಅದು ಆತ್ಮಹತ್ಯೆ ಹಂತಕ್ಕೆ ತಲುಪುತ್ತದೆ ಎಂದು ಭಾವಿಸಿರಲಿಲ್ಲ. ಆತ್ಮಹತ್ಯೆ ವಿಷಯ ತಿಳಿದು ಆಘಾತವಾಯಿತು’ ಎಂದು ವಿಡಿಯೊ ವೈರಲ್ ಮಾಡಿದ ವಿದ್ಯಾರ್ಥಿಗಳು ಹೇಳಿಕೆ ಕೊಟ್ಟಿದ್ದಾರೆ ಎಂದರು.

ADVERTISEMENT

‘ಕಾಲೇಜಿನಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಗಲಾಟೆ ನಡೆದ ದೃಶ್ಯಾವಳಿಗಳು ಪತ್ತೆಯಾಗಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.