ADVERTISEMENT

ಬಹುಮನಿ ಸುಲ್ತಾನರ ಉತ್ಸವಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 20:23 IST
Last Updated 11 ಫೆಬ್ರುವರಿ 2018, 20:23 IST

ಬೆಂಗಳೂರು: ‘ರಾಜ್ಯ ಸರ್ಕಾರವು ಕಲಬುರ್ಗಿಯಲ್ಲಿ ಮಾರ್ಚ್‌ 6ರಂದು ಬಹುಮನಿ ಸುಲ್ತಾನರ ಉತ್ಸವ ನಡೆಸಲು ಉದ್ದೇಶಿಸಿದೆ. ಇದನ್ನು ಕೈಬಿಡಬೇಕು’ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ, ‘ಬಹುಮನಿ ಸುಲ್ತಾನರು ಕನ್ನಡಿಗರನ್ನು ಗುಲಾಮರಂತೆ ಕಂಡಿದ್ದರು. ಇತಿಹಾಸ ಅಧ್ಯಯನ ಮಾಡಿದರೆ ಅವರು ಕ್ರೌರ್ಯ ಎಂತಹದ್ದು ಎಂದು ತಿಳಿಯುತ್ತದೆ’ ಎಂದರು.

‘ಕಲಬುರ್ಗಿ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಅಲ್ಲಿನ ಸಾಹಿತ್ಯ, ಸಂಸ್ಕತಿ ರಕ್ಷಿಸಿದ್ದು ರಾಷ್ಟ್ರಕೂಟರು. ಉತ್ಸವ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.