ADVERTISEMENT

5 ಜಿ ಹೆಸರಿನಲ್ಲಿ ಸೈಬರ್ ವಂಚನೆ: ಬೆಂಗಳೂರಿನಲ್ಲಿ ಪೊಲೀಸರಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 5:39 IST
Last Updated 11 ಅಕ್ಟೋಬರ್ 2022, 5:39 IST
   

ಬೆಂಗಳೂರು: 4 ಜಿ ನೆಟ್‌ವರ್ಕ್‌ನಿಂದ 5 ಜಿ ನೆಟ್‌ವರ್ಕ್‌ ಬದಲಾವಣೆ ನೆಪದಲ್ಲಿ ಗ್ರಾಹಕರಿಗೆ ಕರೆ ಮಾಡುತ್ತಿರುವ ವಂಚಕರು, ವೈಯಕ್ತಿಕ ಮಾಹಿತಿ ಪಡೆದು ಹಣ ದೋಚುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ನಗರದ ಪೊಲೀಸರು ಜನರದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ವಂಚನೆ ಜಾಲದ ಬಗ್ಗೆ ಸುದ್ದಿಗಾ ರರ ಜೊತೆ ಮಾತನಾಡಿದ ಸಿಸಿಬಿ ಡಿಸಿಪಿ ಶರಣಪ್ಪ, ‘ಏರ್‌ಟೆಲ್ ಹಾಗೂ ಇತರೆ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲಿ ವಂಚಕರು ಕರೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಕರೆಗಳ ಬಗ್ಗೆ ಜನರು ಜಾಗೃತಿ ವಹಿಸಬೇಕು. ನೆಟ್‌ವರ್ಕ್‌ ಬದಲಾವಣೆಗಾಗಿ ಮಾಹಿತಿ ಕೋರಿ ಯಾರಾದರೂ ಕರೆ ಮಾಡಿದರೆ, ಪೊಲೀಸ್ ನಿಯಂತ್ರಣ ಕೊಠಡಿ–112ಕ್ಕೆ ಕರೆ ಮಾಡಿ’ ಎಂದರು.

‘ವೈಯಕ್ತಿಕ ಮಾಹಿತಿ ಪಡೆಯುವ ವಂಚಕರು, ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್) ಕೇಳುತ್ತಿದ್ದಾರೆ. ಅದನ್ನು ನೀಡುತ್ತಿದ್ದಂತೆ, ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಿರು
ವುದು ಗೊತ್ತಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.