ADVERTISEMENT

ಬೆಂಗಳೂರು: ವಿಮೆ ಹೆಸರಿನಲ್ಲಿ ₹ 7.78 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 20:40 IST
Last Updated 5 ಮಾರ್ಚ್ 2023, 20:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಮೆ ಪಾಲಿಸಿಗಳ ಮೇಲೆ ₹ 79 ಲಕ್ಷ ಕ್ಲೇಮ್ ನೀಡುವುದಾಗಿ ಹೇಳಿ ವೃದ್ಧರೊಬ್ಬರಿಂದ ₹ 7.78 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಯನಗರದ ನಿವಾಸಿ 80 ವರ್ಷದ ವ್ಯಕ್ತಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವೃದ್ಧ, ಹಲವು ಕಂಪನಿಗಳಡಿ 22 ವಿಮೆ ಪಾಲಸಿಗಳನ್ನು ಮಾಡಿಸಿದ್ದಾರೆ. ಇದನ್ನು ತಿಳಿದುಕೊಂಡಿದ್ದ ಆರೋಪಿ, ವೃದ್ಧರಿಗೆ ಕರೆ ಮಾಡಿದ್ದ. ‘ನಾವು ವಿಮೆ ಕಂಪನಿಯಿಂದ ಮಾತನಾಡುವುದು. ನಿಮ್ಮ ಪಾಲಿಸಿಗಳ ಮೇಲೆ ಕಮಿಷನ್ ಹಾಗೂ ಬೋನಸ್ ಸೇರಿ ₹ 79 ಲಕ್ಷ ಕ್ಲೇಮ್ ನೀಡುತ್ತೇವೆ’ ಎಂದಿದ್ದ. ಆರೋಪಿ ಮಾತು ನಂಬಿದ್ದ ದೂರುದಾರ, ಕೇಳಿದ್ದ ಮಾಹಿತಿ ನೀಡಿದ್ದರು. ನೋಂದಣಿ ಹಾಗೂ ಇತರೆ ಶುಲ್ಕ ಕಟ್ಟಬೇಕೆಂದು ಹೇಳಿದ್ದ ಆರೋಪಿ, ₹ 7.78 ಲಕ್ಷ ಪಡೆದುಕೊಂಡಿದ್ದ. ಇದಾದ ನಂತರ, ಯಾವುದೇ ವಿಮೆ ಕ್ಲೇಮ್ ನೀಡದೇ ವಂಚಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.