ADVERTISEMENT

₹ 78ರ ಗಡಿ ದಾಟಿದ ಪೆಟ್ರೋಲ್‌ ದರ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:30 IST
Last Updated 22 ಮೇ 2018, 19:30 IST
₹ 78ರ ಗಡಿ ದಾಟಿದ ಪೆಟ್ರೋಲ್‌ ದರ
₹ 78ರ ಗಡಿ ದಾಟಿದ ಪೆಟ್ರೋಲ್‌ ದರ   

ಬೆಂಗಳೂರು: ನಗರದಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹ 78ರ ಗಡಿ ದಾಟಿದೆ.

ಈ ತಿಂಗಳ 14ರಂದು ಪ್ರತಿ ಲೀಟರ್‌ಗೆ ₹ 75.82 ರಷ್ಟಿದ್ದ ಪೆಟ್ರೋಲ್‌ ಬೆಲೆ, ಎಂಟು ದಿನಗಳಲ್ಲಿ ₹ 2.34ರಷ್ಟು ತುಟ್ಟಿಯಾಗಿದೆ. ಡೀಸೆಲ್‌ ದರವು ಕೂಡ ₹ 67.08 ರಿಂದ ₹ 69.29ಕ್ಕೆ ತಲುಪಿ ₹ 2.21 ರಷ್ಟು ದುಬಾರಿಯಾಗಿದೆ.

ವಿಧಾನಸಭೆ ಚುನಾವಣೆ ಕಾರಣಕ್ಕೆ ತಡೆಹಿಡಿಯಲಾಗಿದ್ದ ಪ್ರತಿ ದಿನದ ಬೆಲೆ ಪರಿಷ್ಕರಣೆ ವಿಧಾನವು ಒಂದು ವಾರದಿಂದ ಈಗ ಮತ್ತೆ ಜಾರಿಗೆ ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ತಮ್ಮ ನಷ್ಟ ಭರ್ತಿ ಮಾಡಿಕೊಳ್ಳಲು ಪ್ರತಿ ದಿನವೂ ಬೆಲೆ ಏರಿಸುತ್ತಿವೆ.

ADVERTISEMENT

3–4 ದಿನದಲ್ಲಿ ಪರಿಹಾರ: ‍ಪೆಟ್ರೋಲಿಯಂ ಏರಿಕೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮೂರು ನಾಲ್ಕು ದಿನದಲ್ಲಿ ಪರಿಹಾರ ಕಂಡುಹಿಡಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ತಿಳಿಸಿದರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.