ADVERTISEMENT

8 ವರ್ಷಗಳ ನಂತರ ತುಂಬಿದ ದೇವರಹೊಸಹಳ್ಳಿ ಕೆರೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ನಿಜಗಲ್ ಕೆರೆ
ನಿಜಗಲ್ ಕೆರೆ   

ದಾಬಸ್‌ಪೇಟೆ: ಈ ಬಾರಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು, ಎಂಟು ವರ್ಷಗಳಿಂದ ತುಂಬಿರದಿದ್ದ ದೇವರ ಹೊಸಹಳ್ಳಿ ಕೆರೆ ಮರುಜೀವ ಪಡೆದುಕೊಂಡಿದೆ.

84.64 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಈಗ ಕೋಡಿ ಹರಿಯುತ್ತಿದೆ. ಇದರೊಂದಿಗೆ ಸಿದ್ಧರಬೆಟ್ಟದ ತಪ್ಪಲಿನಲ್ಲಿರುವ 13.76 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ನಿಜಕಲ್‌ ಕೆರೆಯೂ ಮೈದುಂಬಿ ಹರಿಯುತ್ತಿದೆ.

30.35 ಹೆಕ್ಟೇರ್ ವಿಸ್ತೀರ್ಣದ ಬಿಲ್ಲಿನಕೋಟೆ ಕೆರೆ, 14.98 ಹೆಕ್ಟೇರ್ ವಿಸ್ತೀರ್ಣದ ಮಗದ ಕೆರೆ ಹಾಗೂ ರಾಯರಪಾಳ್ಯದ ಕೆರೆಗಳು ತುಂಬಿ ಹರಿಯುತ್ತಿವೆ.

ADVERTISEMENT

ಚನ್ನೋಹಳ್ಳಿ, ನರಸೀಪುರ, ಬುಗಡಿಹಳ್ಳಿ, ಕಂಬಾಳು, ನಿಜಗಲ್ ಕೆಂಪೋಹಳ್ಳಿ, ನಿಡವಂದ, ಮರಳುಕುಂಟೆ, ದಾಬಸ್ ಪೇಟೆ ಕೆರೆಗಳಲ್ಲಿಯೂ ಹೆಚ್ಚು ಪ್ರಮಾಣದ ನೀರು ಸಂಗ್ರಹಗೊಂಡಿದೆ.

‘ಹಲವು ವರ್ಷಗಳ ತರುವಾಯ ಕೆರೆಗಳಲ್ಲಿ ನೀರು ಕಾಣುತ್ತಿದ್ದೇವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪುತ್ತದೆ. ಕೃಷಿಗೂ ಅನುಕೂಲವಾಗಲಿದೆ’ ಎಂದು ರೈತರು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.