ADVERTISEMENT

ಕೋವಿಡ್–19: 10 ದಿನಗಳಲ್ಲಿಯೇ ಗುಣಮುಖರಾದ 99 ವರ್ಷದ ಅಜ್ಜಿ

ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 5,969 ಮಂದಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:01 IST
Last Updated 20 ಆಗಸ್ಟ್ 2020, 21:01 IST
ಪಾರ್ವತಿ ಬಾಯಿ
ಪಾರ್ವತಿ ಬಾಯಿ   

ಬೆಂಗಳೂರು:ಕೊರೊನಾ ಸೋಂಕಿತ 99 ವರ್ಷದ ವೃದ್ಧೆಯೊಬ್ಬರು 10 ದಿನಗಳಲ್ಲಿಯೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮಲ್ಲೇಶ್ವರದ ನಿವಾಸಿ ಪಾರ್ವತಿಬಾಯಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಅಧಿಕ ರಕ್ತದೊತ್ತಡ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಆ.1ರಂದು ಸೋಂಕಿತರಾಗಿರುವುದು ದೃಢಪಟ್ಟ ಕಾರಣ ಮಲ್ಲೇಶ್ವರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಅವರಿಗೆ ಮೊದಲ ದಿನಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್‌) ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಅವರು, ಆ.11ರಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

‘ಪಾರ್ವತಿಬಾಯಿ ಅವರಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡೆವು. ಸೋಂಕು ಅವರ ಜೀವಕ್ಕೆ ಅಪಾಯ ಮಾಡುವ ಸಾಧ್ಯತೆಗಳಿದ್ದರಿಂದ ನಿರಂತರ ನಿಗಾ ಇಡಲಾಗಿತ್ತು. ಪೂರಕ ಚಿಕಿತ್ಸೆಯಿಂದ ಬೇಗ ಚೇತರಿಸಿಕೊಂಡರು. ಅವರು ಗುಣಮುಖರಾಗಿರುವುದು ನಮಗೆಲ್ಲ ಖುಷಿಯ ಜತೆಗೆ ಹೊಸ ಭರವಸೆಯನ್ನುಂಟು ಮಾಡಿದೆ’ ಎಂದು ಆಸ್ಪತ್ರೆಯಮೂತ್ರಪಿಂಡಶಾಸ್ತ್ರ ವಿಭಾಗದ ಸಲಹೆಗಾರ ಡಾ. ಜಿ.ಕೆ. ಪ್ರಕಾಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.