ADVERTISEMENT

ಬೆಂಗಳೂರು: ಮೆಟ್ರೊದಲ್ಲಿ ಭಿಕ್ಷಾಟನೆ ನಡೆಸಿ ಇಳಿದು ಹೋದ ಅಂಗವಿಕಲ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:16 IST
Last Updated 14 ಡಿಸೆಂಬರ್ 2024, 14:16 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಶನಿವಾರ ಅಂಗವಿಕಲರೊಬ್ಬರು ಭಿಕ್ಷೆ ಬೇಡಿರುವ ಪ್ರಕರಣ ನಡೆದಿದೆ.

ಚಲ್ಲಘಟ್ಟ ನಿಲ್ದಾಣದಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮೆಟ್ರೊ ರೈಲು ಹತ್ತಿರುವ ಅವರು ಕೆಂಗೇರಿ ನಿಲ್ದಾಣದವರೆಗೆ ಭಿಕ್ಷೆ ಬೇಡಿ ಇಳಿದು ಹೋಗಿದ್ದಾರೆ. ಭಿಕ್ಷೆ ಬೇಡಿರುವ ಬಗ್ಗೆ ಪ್ರಯಾಣಿಕರು ಬಿಎಂಆರ್‌ಸಿಎಲ್‌ಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಮೆಟ್ರೊ ಸಿಬ್ಬಂದಿ ಪರಿಶೀಲಿಸಿದಾಗ ಭಿಕ್ಷೆ ಬೇಡಿ ಇಳಿದುಹೋಗಿರುವುದು ಪತ್ತೆಯಾಗಿದೆ.

ADVERTISEMENT

ಮೆಟ್ರೊದಲ್ಲಿ ಭಿಕ್ಷೆ ಬೇಡಲು ಅವಕಾಶವಿಲ್ಲ. ಅಪರೂಪಕ್ಕೆ ಪ್ರಯಾಣಿಕರಂತೆ ಬಂದು ಭಿಕ್ಷೆ ಬೇಡಿದ ಘಟನೆ ನಡೆದಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಶಂಕರ್‌ ಎ.ಎಸ್‌. ‘ಪ್ರಜಾವಾಣಿ’ಗೆ ತಿಳಿಸಿದರು.

2023ರ ನವೆಂಬರ್‌ನಲ್ಲಿ ಶ್ರವಣದೋಷವುಳ್ಳ ಯುವಕನೊಬ್ಬ ಹಸಿರು ಮಾರ್ಗದಲ್ಲಿ ಭಿಕ್ಷೆ ಬೇಡಿದ್ದು ಮೆಟ್ರೊದಲ್ಲಿ ಭಿಕ್ಷಾಟನೆ ನಡೆಸಿದ ಮೊದಲ ಪ್ರಕರಣವಾಗಿತ್ತು. ಶನಿವಾರ ನಡೆದ ಭಿಕ್ಷಾಟನೆ ಎರಡನೇಯದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.