ಪೀಣ್ಯ ದಾಸರಹಳ್ಳಿ: ‘ಹೆಸರಾಯಿತು ಕರ್ನಾಟಕ ಸುವರ್ಣ ಸಂಭ್ರಮ 50’ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಕನ್ನಡ ರಥಕ್ಕೆ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಕನ್ನಡ ರಥದಲ್ಲಿನ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ವಿಜಯಶ್ರೀ ಪಬ್ಲಿಕ್ ಶಾಲೆ, ವಿಐಪಿ ಗಾರ್ಡನ್ ಮಾರ್ವೆಲ್ ಶಾಲೆ, ಇಂಡಿಯನ್ ಪಬ್ಲಿಕ್ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್, ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್, ಜಾನಪದ ವಿದ್ವಾಂಸ ಟಿ.ಗೋವಿಂದರಾಜು ಹಾಗೂ ಸಿಬ್ಬಂದಿಗೆ ವಸ್ತ್ರ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ವಿವಿಧ ಘಟಕಗಳ ಅಧ್ಯಕ್ಷರಾದ ಕಾಳೇನಹಳ್ಳಿ ಲಿಂಗರಾಜು, ಎಂ.ನಾಗೇಶ್, ಆದೂರು ಪ್ರಕಾಶ್, ವರ್ಧಮಾನ ಕಳಸೂರು, ಗೌಡಗೆರೆ ಮಾಯುಶ್ರೀ, ಹನುಮಂತ ಪಿ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಭೀಮ್ ಜಿ, ಗೋವಿಂದರಾಜು ಪಟೇಲ್, ಶಿವಲಿಂಗಯ್ಯ , ಖಾದ್ರಿ ನರಸಿಂಹಯ್ಯ ಹಾಗೂ ಸಾಹಿತಿ ವೈ.ಬಿ.ಎಚ್.ಜಯದೇವ್, ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಕೊಣ್ಣೂರ್, ಕಲಾವಿದ ಉಪಾದ್ರಿ ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.