ADVERTISEMENT

ದಾಬಸ್ ಪೇಟೆ: ₹30 ಲಕ್ಷ ಬೆಲೆಯ ಮರ ತುಂಡು ವಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 18:48 IST
Last Updated 9 ಡಿಸೆಂಬರ್ 2023, 18:48 IST
ರಹದಾರಿ ಇಲ್ಲದ ಮರಗಳ ತುಂಡುಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ
ರಹದಾರಿ ಇಲ್ಲದ ಮರಗಳ ತುಂಡುಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ   

ದಾಬಸ್ ಪೇಟೆ: ಪರವಾನಗಿ ಪಡೆಯದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ₹30 ಲಕ್ಷ ಬೆಲೆಯ ಮರದ ತುಂಡುಗಳನ್ನು ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್ ಎಸ್. ಮತ್ತು ಸಿಬ್ಬಂದಿ ಯಂಟಗಾನಹಳ್ಳಿ ಟೋಲ್ ಬಳಿ ಗುರುವಾರ ರಾತ್ರಿ, ಕುಣಿಗಲ್ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ಯಾಂಟರ್ ವಾಹನವನ್ನು ಪರಿಶೀಲಿಸಿದಾಗ ಬೀಟೆ, ಹಲಸು, ಹೊನ್ನೆಮರದ ತುಂಡಗಳು ಪತ್ತೆಯಾಗಿದ್ದವು.

ಸಕಲೇಶಪುರದಿಂದ ತಂದಿರುವುದಾಗಿ ಚಾಲಕ ಕುಮಾರ್‌ ಟಿ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಲಸು, ಹೊನ್ನೆ ಮರಗಳಿಗೆ ಮಾತ್ರ ಅನುಮತಿ ಪಡೆದು, ಅವುಗಳೊಂದಿಗೆ ಅನುಮತಿ ಇಲ್ಲದೇ ಬೀಟೆ ಮರದ ತುಂಡುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್.ಎಸ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.