ADVERTISEMENT

ಇನ್ಫೊಸಿಸ್ ಸಹಯೋಗದಲ್ಲಿ ಇಂದಿನಿಂದ ಬೊಂಬೆ ಹಬ್ಬ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 20:00 IST
Last Updated 11 ಮಾರ್ಚ್ 2023, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನವು ಇದೇ 12ರಿಂದ 18ರವರೆಗೆ ‘ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಶೀರ್ಷಿಕೆಯಡಿ ಬೊಂಬೆ ಹಬ್ಬ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಮಾಧ್ಯಮ ಸಹ ಯೋಗವಿದ್ದು, ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದ ಇ.ಎಸ್.ವಿ. ಸಭಾಂಗಣದಲ್ಲಿ ನಡೆಯಲಿದೆ.

ಪ್ರತಿದಿನ ಎಂ.ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರಿಂದ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಬೊಂಬೆ ಪ್ರದರ್ಶನ, ಕಲಾವಿದ ಜಿ.ಎಸ್.ಬಿ. ಅಗ್ನಿಹೋತ್ರಿ ನಿರ್ದೇಶನ ದಲ್ಲಿ ‘ಕಲಾಶಿಬಿರ’ ಹಾಗೂ ಎನ್. ಶ್ರೀದೇವಿ ಅವರಿಂದ ಬೊಂಬೆ ಅಂಚೆಚೀಟಿಗಳ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ADVERTISEMENT

ಭಾನುವಾರ ಬೆಳಿಗ್ಗೆ 10.30ಕ್ಕೆ ಬೊಂಬೆ ಉತ್ಸವವನ್ನು ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಧಾತು ಪಪೆಟ್ ಥಿಯೇಟರ್ ‘ಬೊಂಬೆಗಳ ಕಾವ್ಯಾಭಿವ್ಯಕ್ತಿ’ಯನ್ನು ಪ್ರಸ್ತುತಪಡಿಸಲಿದೆ. ಸಂಜೆ 5ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿ ಬೊಂಬೆಗಳನ್ನು ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸ ಲಿದೆ.

ಒಂದು ವಾರ ನಡೆಯುವ ಬೊಂಬೆ ಹಬ್ಬದಲ್ಲಿ ಪ್ರತಿದಿನ ವಿದ್ವಾಂಸರಿಂದ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ನಾಟಕ ಮತ್ತು ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ ಕುರಿತು ವಿಶೇಷ ಉಪನ್ಯಾಸ ಗಳನ್ನು ಏರ್ಪಡಿಸಲಾಗಿದೆ. ಬೊಂಬೆ ಗಳನ್ನು ಕುರಿತು ವಿಶ್ವವಿಖ್ಯಾತ ಸಿನಿಮಾ ಗಳೂ ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.