ADVERTISEMENT

ಎ.ಸಿ ಘಟಕ ಕದ್ದು ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:45 IST
Last Updated 24 ನವೆಂಬರ್ 2022, 19:45 IST

ಬೆಂಗಳೂರು: ಹವಾನಿಯಂತ್ರಿತ (ಎ.ಸಿ) ಘಟಕ ಹಾಗೂ ನೀರಿನ ಮೋಟರ್ ಪಂಪ್ ಕಳ್ಳತನ ಮಾಡಿದ್ದ ಆರೋಪದಡಿ ಸೈಯದ್ ಸುಹೇಲ್ (28) ಎಂಬುವವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಸುಹೇಲ್, ಮೋಟರ್ ಪಂಪ್ ದುರಸ್ತಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಸಾಲದಿದ್ದರಿಂದ ಹೆಚ್ಚು ಹಣ ಗಳಿಸಲು ಇತ್ತೀಚೆಗೆ ಕೃತ್ಯ ಎಸಗಿದ್ದ. ಈತನನ್ನು ಬಂಧಿಸಿ, ₹ 1.60 ಲಕ್ಷ ಮೌಲ್ಯದ ಎ.ಸಿ ಘಟಕ ಹಾಗೂ ಮೋಟರ್ ಪಂಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT