ADVERTISEMENT

ಲೈಂಗಿಕ ದೌರ್ಜನ್ಯ: ಮಹಿಳೆಯರು ಮೌನ ಮುರಿಯಬೇಕು: ಪ್ರಮೀಳಾ ನಾಯ್ಡು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 2:07 IST
Last Updated 12 ಅಕ್ಟೋಬರ್ 2022, 2:07 IST
ಚೌಲ್ಟ್ರಿ ಕಾರ್ಮಿಕರ ಜೀವನ ಘನತೆ ಮತ್ತು ಭದ್ರತೆ ಕುರಿತು ಆ್ಯಕ್ಷನ್ ಏಯ್ಡ್‌ ಪ್ರಕಟಿಸಿರುವ ‘ಅಗೋಚರವಾಗಿರುವ ಕಾರ್ಮಿಕರು’ ಅಧ್ಯಯನ ವರದಿಯನ್ನು ಎಸ್‌.ಪಿ.ರವಿಕುಮಾರ್ ಬಿಡುಗಡೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಗೀತಾ ಪಾಟೀಲ, ಪ್ರಮೀಳಾ ನಾಯ್ಡು, ಆ್ಯಕ್ಷನ್ ಏಯ್ಡ್ ಸಂಸ್ಥೆಯ ಸಹ ನಿರ್ದೇಶಕಿ ಎಸ್ತರ್ ಮರಿಯಸೆಲ್ವಂ ಇದ್ದರು
ಚೌಲ್ಟ್ರಿ ಕಾರ್ಮಿಕರ ಜೀವನ ಘನತೆ ಮತ್ತು ಭದ್ರತೆ ಕುರಿತು ಆ್ಯಕ್ಷನ್ ಏಯ್ಡ್‌ ಪ್ರಕಟಿಸಿರುವ ‘ಅಗೋಚರವಾಗಿರುವ ಕಾರ್ಮಿಕರು’ ಅಧ್ಯಯನ ವರದಿಯನ್ನು ಎಸ್‌.ಪಿ.ರವಿಕುಮಾರ್ ಬಿಡುಗಡೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಗೀತಾ ಪಾಟೀಲ, ಪ್ರಮೀಳಾ ನಾಯ್ಡು, ಆ್ಯಕ್ಷನ್ ಏಯ್ಡ್ ಸಂಸ್ಥೆಯ ಸಹ ನಿರ್ದೇಶಕಿ ಎಸ್ತರ್ ಮರಿಯಸೆಲ್ವಂ ಇದ್ದರು   

ಬೆಂಗಳೂರು: ಲೈಂಗಿಕ ದೌರ್ಜನ್ಯದ ವಿಷಯದಲ್ಲಿ ಮಹಿಳೆಯರು ಮೌನ ಮುರಿಯಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದರು.

ಆ್ಯಕ್ಷನ್ ಏಯ್ಡ್‌ ಅಸೋಸಿಯೇಷನ್ ಮತ್ತು ಸ್ಲಂ ಮಹಿಳಾ ಸಂಘಟನೆ ಆಯೋಜಿಸಿದ್ದ ಚೌಲ್ಟ್ರಿ ಕಾರ್ಮಿಕರ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಹಿಳಾ ಚೌಲ್ಟ್ರಿ ಕಾರ್ಮಿಕರ ಈ ಸಂಘಟಿತ ಪ್ರಯತ್ನಕ್ಕೆ ಆಯೋಗದ ಬೆಂಬಲವಿದೆ. ಕುಟುಂಬದಲ್ಲಾಗಲೀ, ಕೆಲಸದ ಸ್ಥಳದಲ್ಲಾಗಲಿ ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸಬಾರದು’ ಎಂದರು.‌

ADVERTISEMENT

ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಎಸ್.ಪಿ.ರವಿಕುಮಾರ್‌ ಮಾತನಾಡಿ, ಚೌಲ್ಟ್ರಿ ಕಾರ್ಮಿಕರು ಕೂಡ ಕಾರ್ಮಿಕರೇ ಆಗಿದ್ದಾರೆ. ಜಾತಿ, ಲಿಂಗ ಮತ್ತು ಮತಾಧಾರಿತ ಶೋಷಣೆಗಳು ಯಾರ ವಿರುದ್ಧವೂ ನಡೆಯಬಾರದು ಎಂದರು.

‘ದೇಶದಲ್ಲಿ ಶೇ 82ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ ಮಹಿಳೆಯರೇ ಹೆಚ್ಚು. ದೇಶದ ಆರ್ಥಿಕತೆಗೆ ಅವರು ಬಹುಮುಖ್ಯ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆಯನ್ನು 5 ವರ್ಷಕ್ಕೊಮ್ಮೆ ಮಾಡುತ್ತಿದ್ದು, ತಿಂಗಳಿಗೆ ₹13,200 ಪ್ರತಿ ಕಾರ್ಮಿಕರಿಗೂ ಸಿಗಬೇಕು. ಚೌಲ್ಟ್ರಿ ಕಾರ್ಮಿಕರು ಕೂಡ ‘ಶ್ರಮ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗದ ಕಾರ್ಯದರ್ಶಿ ಡಾ. ಶಿವರಾಮ್ ಮಾತನಾಡಿ, ‘ಚೌಲ್ಟ್ರಿ ಕಾರ್ಮಿಕರು ಜಾತಿ ನಿಂದನೆಗೆ ಒಳಪಟ್ಟಲ್ಲಿ ಆಯೋಗಕ್ಕೆ ದೂರು ಸಲ್ಲಿಸಬಹುದು. ನ್ಯಾಯಯುತವಾಗಿ ಕಾರ್ಮಿಕರಿಗೆ ಬೆಂಬಲ ನೀಡುಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.