ADVERTISEMENT

ಚಟುವಟಿಕೆ ಆಧಾರಿತ ಶಿಕ್ಷಣ ಮುಖ್ಯ: ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:40 IST
Last Updated 27 ಜನವರಿ 2023, 21:40 IST
ವಿಚಾರ ಸಂಕಿರಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ. ಬಿ. ಕಾವೇರಿ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ. ಬಿ. ಕಾವೇರಿ ಮಾತನಾಡಿದರು.   

ಬೆಂಗಳೂರು: ಅಕ್ಷರ ಫೌಂಡೇಶನ್ ವತಿಯಿಂದ ‘ಇವತ್ತಿನ ಸಂದರ್ಭದಲ್ಲಿ ‘ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಎಸ್‌ಟಿಇಎಂ)’ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿತ್ತು.

’ಇಟ್ ಆಲ್ ಆಡ್ಸ್ ಅಪ್ 2022-23’ ಶೀರ್ಷಿಕೆಯಡಿಯಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಮೂರು ಗೋಷ್ಠಿಗಳು ನಡೆದವು.

ಫೌಂಡೇಶನ್‌ನ ಅಧ್ಯಕ್ಷ ಅಶೋಕ್ ಕಾಮತ್ ಮಾತನಾಡಿ, ‘ಶಿಕ್ಷಣದಲ್ಲಿನ ಗುಣಮಟ್ಟ ಹೆಚ್ಚಿಸಲು ಸರ್ವಶಿಕ್ಷಾ ಅಭಿಯಾನದ ಮಾದರಿಯ ಇನ್ನೊಂದು ಯೋಜನೆಯ ಅಗತ್ಯವಿದೆ. 2001 ರಲ್ಲಿ ಸುಮಾರು ಶೇ 60ರಷ್ಟು ಮಕ್ಕಳು ಮಾತ್ರ ಶಾಲೆಗೆ ಹಾಜರಾಗುತ್ತಿದ್ದರು. ಸರ್ವಶಿಕ್ಷಾ ಅಭಿಯಾನವು ಶಾಲಾ ಹಾಜರಾತಿಯನ್ನು ಶೇ 95ಕ್ಕೆ ಹೆಚ್ಚಿಸಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಏರಿಕೆಯ ಜತೆಗೆ ಗುಣಮಟ್ಟವೂ ಮುಖ್ಯ. ಚಟುವಟಿಕೆ ಆಧಾರಿತ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ. ಬಿ. ಕಾವೇರಿ ಮಾತನಾಡಿ, ‘ಕೋವಿಡ್ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮವು ಮಕ್ಕಳು ಮತ್ತು ಶಿಕ್ಷಕರಲ್ಲಿ ವಿಷಯ ಗ್ರಹಿಕೆಯ ಮಟ್ಟವನ್ನು ಹೆಚ್ಚಿಸಿತು’ ಎಂದು ವಿವರಿಸಿದರು.

ಶಿಕ್ಷಣ ತಜ್ಞ ಶಿವಶಂಕರ ಶಾಸ್ತ್ರಿ, ಡಯಟ್ ಹಿರಿಯ ಶಿಕ್ಷಕ ಟಿ.ಕೆ. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.