ADVERTISEMENT

ಹತ್ತು ಸೆಕೆಂಡ್‌ಗಳಲ್ಲಿ ಹೃದಯ ಸಮಸ್ಯೆ ಪತ್ತೆ: ಎಐ ಮಾದರಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 20:43 IST
Last Updated 5 ಆಗಸ್ಟ್ 2025, 20:43 IST
   

ಬೆಂಗಳೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಕೇವಲ ಹತ್ತು ಸೆಕೆಂಡ್‌ಗಳಲ್ಲಿ ಹೃದಯ ಸಮಸ್ಯೆ ಪತ್ತೆ ಮಾಡುವ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ನಾರಾಯಣ ಹೆಲ್ತ್ ತಿಳಿಸಿದೆ. 

‘ಒಂದು ಲಕ್ಷಕ್ಕೂ ಹೆಚ್ಚು ಇಸಿಜಿ ಚಿತ್ರಣಗಳು ಮತ್ತು ‘ಎಕೋಕಾರ್ಡಿಯೋಗ್ರಾಮ್’ ವರದಿಗಳ ಜೋಡಣೆಯ ಆಧಾರದ ಮೇಲೆ ಎಐ ಮಾದರಿಯನ್ನು ತರಬೇತಿಗೊಳಿಸಲಾಗಿದೆ. ಈ ಮಾದರಿಯು ಅತ್ಯುತ್ತಮ ಫಲಿತಾಂಶವನ್ನು ಒದಗಿಸಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 57 ಸಾವಿರಕ್ಕೂ ಹೆಚ್ಚು ರೋಗಿಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ಮಾಡಿ, ಹೃದಯ ಸಮಸ್ಯೆ ಪತ್ತೆ ಮಾಡಲಾಗಿದೆ. ಸಂಸ್ಥೆಯ ಕ್ಲಿನಿಕಲ್ ಸಂಶೋಧನಾ ತಂಡ ಮತ್ತು ವಿಶ್ಲೇಷಣಾ ತಂಡ ಈ ಮಾದರಿ ಅಭಿವೃದ್ಧಿಪಡಿಸಿದೆ’ ಎಂದು ಸಂಸ್ಥೆಯ ವೈದ್ಯರು ಮಾಹಿತಿ ನೀಡಿದ್ದಾರೆ. 

‘ವೈದ್ಯಕೀಯ ಪರಿಣತಿ, ಸಂಶೋಧನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ಈ ಮಾದರಿ ಅಭಿವೃದ್ಧಿಪಡಿಸಲಾಗಿದೆ. ಸರಳ ಇಸಿಜಿಯ ಮೂಲಕ ಹೃದಯ ವೈಫಲ್ಯವನ್ನು ತಕ್ಷಣವೇ ಪತ್ತೆ ಮಾಡಿ, ರೋಗ ನಿರ್ಣಯಿಸಲು ಸಹಕಾರಿಯಾಗಲಿದೆ’ ಎಂದು ನಾರಾಯಣ ಹೆಲ್ತ್‌ನ ಸಂಸ್ಥಾಪನಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.