ಬೆಂಗಳೂರು: ವಾಯುಸೇನೆ ಇಕ್ವಿಪ್‌ಮೆಂಟ್ (ಸಲಕರಣೆ) ಡಿಪೊ ನೂತನ ಕಮಾಂಡ್ ಆಗಿ ಏರ್ ಕಮೊಡೋರ್ ಕೌಸ್ತುಭ್ ಆಪ್ಟೆ ಸೋಮವಾರ ಅಧಿಕಾರ ಸ್ವೀಕರಿಸಿದರು.
ಏರ್ ಕಮೊಡೋರ್ ಮನೋಜ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು. ಕೌಸ್ತುಭ್ ಆಪ್ಟೆ ಭೌತ ವಿಜ್ಞಾನ ಸ್ನಾತಕೋತ್ತರ ಪದವೀಧರರಾಗಿದ್ದು, ರಾಜ್ಯಶಾಸ್ತ್ರದಲ್ಲಿ ಎಂ.ಫಿಲ್. ಮಾಡಿದ್ದರು. ಐಐಟಿ ಮದ್ರಾಸ್‌ನಲ್ಲಿ ಎಂಬಿಎ, ಸಾರ್ವಜನಿಕ ಸಂಗ್ರಹಣೆಯಲ್ಲಿ ಡಿಪ್ಲೊಮಾ, ವಸ್ತು ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ.
ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜು, ಸಿಕಂದರಾಬಾದ್‌ನ ಕಾಲೇಜ್ ಆಫ್ ಏರ್ ವಾರ್‌ಫೇರ್ ಮತ್ತು ಕೊಯಮತ್ತೂರಿನ ಏರ್ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನ ಹಳೇ ವಿದ್ಯಾರ್ಥಿ ಆಗಿರುವ ಕೌಸ್ತುಭ್ ಆಪ್ಟೆ, 1992ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದರು. ಲಾಜಿಸ್ಟಿಕ್ ಶಾಖೆಯಲ್ಲಿ ನಿಯೋಜಿತರಾಗಿದ್ದರು.
ಸಲಕರಣೆ ಡಿಪೊ ಕಮಾಂಡ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ಏರ್ ಹೆಡ್ ಕ್ವಾರ್ಟರ್‌ನಲ್ಲಿ ಸಂಗ್ರಹಣಾ ವಿಭಾಗದ ಏರ್ ಕಮೊಡೋರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.