ADVERTISEMENT

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 5:48 IST
Last Updated 18 ನವೆಂಬರ್ 2025, 5:48 IST
<div class="paragraphs"><p>ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್</p></div>

ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

   

ಚಿತ್ರ ಕೃಪೆ: yadavakhilesh

ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ. 

ADVERTISEMENT

ಇದರ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕರ್ನಾಟಕದ ನೆನಪು, ಹಳೆಯ ಬಂಧ, ಧನ್ಯವಾದಗಳು ಬೆಂಗಳೂರು!’ ಎಂದು ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಅಖಿಲೇಶ್‌, ಗೃಹ ಸಚಿವ ಜಿ. ಪರಮೇಶ್ವರ ಅವರ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ಅಖಿಲೇಶ್ ಪರಮೇಶ್ವರ ಅವರ ಭೇಟಿ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿ, ‘ಇದು ಸೌಜನ್ಯ ಮತ್ತು ಶಿಷ್ಟಾಚಾರದ ಭೇಟಿ ಅಷ್ಟೇ’ ಎಂದಿದ್ದರು.

ಈ ಬಗ್ಗೆ ನ.15ರಂದು ಪರಮೇಶ್ವರ ಅವರು ಫೋಟೊ ಹಂಚಿಕೊಂಡಿದ್ದಾರೆ.ರಾಮೇಶ್ವರಂ ಕೆಫೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.