ADVERTISEMENT

ಕಲಾಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 16:35 IST
Last Updated 19 ಅಕ್ಟೋಬರ್ 2021, 16:35 IST

ಬೆಂಗಳೂರು: ‘ಫೀನಿಕ್ಸ್‌ ಕೆಸ್ಸಾಕು–ದಿ ಮಾಸ್ಟರ್‌ಪೀಸ್‌’ ವತಿಯಿಂದ ಚಿತ್ರಕಲೆ ಹಾಗೂ ಕಲಾಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

‘ಅಲ್ಕೆಮಿ’ ಹೆಸರಿನ ಈ ಪ್ರದರ್ಶನವು ಇದೇ 18ರಂದು ಆರಂಭವಾಗಿದ್ದು, 31ರವರೆಗೂಬೆಳಿಗ್ಗೆ 11 ರಿಂದ ಸಂಜೆ 7ರ ವರೆಗೆ ರಾಜಾಜಿನಗರದಲ್ಲಿ ನಡೆಯಲಿದೆ.

‘ಅರವಿಂದ ಸಮಂತ, ಪರಮೇಶ್ವರ ರಾಜು, ವಾಸವನ್‌, ರೋಷನ್‌ ಬಾಬ್ಬಿ, ಸೌಮ್ಯ ಬಂಡೋಪಾಧ್ಯಾಯ, ರೂಪ್‌ಚಂದ್‌ ಕುಂದು ಸೇರಿದಂತೆ 21 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಯನ್ನು ತಿಳಿಸಲು ಕಲೆಗಿಂತಲೂ ಉತ್ತಮ ಮಾರ್ಗ ಮತ್ತೊಂದಿಲ್ಲ. ಹೀಗಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಫೀನಿಕ್ಸ್‌ ಕೆಸ್ಸಾಕು ಅಭಿವೃದ್ಧಿ ಅಧಿಕಾರಿ ರಾಘವ್‌ ಬೊಜೊರಿಯಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.