ADVERTISEMENT

‘ಅಲಯನ್ಸ್‌ ಸಾಹಿತ್ಯ ಉತ್ಸವ’ 20ಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:44 IST
Last Updated 6 ಮೇ 2022, 15:44 IST

ಬೆಂಗಳೂರು: ಅಲಯನ್ಸ್‌ ವಿಶ್ವವಿದ್ಯಾಲಯವು ಮೇ 20 ಮತ್ತು 21ರಂದು ಸಾಹಿತ್ಯ ಉತ್ಸವ ಆಯೋಜಿಸಿದೆ.

ವಿಶ್ವವಿದ್ಯಾಲಯದ ಮಾನವಿಕ ವಿಷಯಗಳ ಅಧ್ಯಯನ ವಿಭಾಗವು ಆಯೋಜಿಸಿರುವ ‘ಅಲಯನ್ಸ್‌ ಸಾಹಿತ್ಯ ಉತ್ಸವ’ದಲ್ಲಿ (ಎಎಲ್‌ಎಫ್‌) ವಿವಿಧ ಕ್ಷೇತ್ರಗಳ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಈ ಉತ್ಸವವು ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ರಾಜಕೀಯ, ಮಾಧ್ಯಮ, ಸಂಗೀತ ಮುಂತಾದ ಕ್ಷೇತ್ರಗಳ ಕುರಿತ ಚರ್ಚೆಗೆ ಸಾಕ್ಷಿಯಾಗಲಿದೆ.

ADVERTISEMENT

‘ಎರಡು ದಿನಗಳ ಈ ಉತ್ಸವದಲ್ಲಿ ಸಂಸದ ಶಶಿ ತರೂರು, ಪತ್ರಕರ್ತ ರಾಜದೀಪ್‌ ಸರದೇಸಾಯಿ, ಸಾಹಿತಿಗಳಾದ ಅನಿತಾ ನಯ್ಯರ್‌, ಪ್ರತಿಭಾ ನಂದಕುಮಾರ್‌, ಮಮತಾ ಸಾಗರ, ವಸುಧೇಂದ್ರ ಹಾಗೂ ಗಾಯಕಿ ಉಷಾ ಉತ್ತುಪ್‌ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿ ಕೆನ್ನಿ ಸೆಬಾಸ್ಟಿಯನ್‌ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಸಮಕುಲಾಧಿಪಾತಿ ಅಭಯ್‌ ಜಿ. ಚೆಬ್ಬಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ವಿಶ್ವವಿದ್ಯಾಲಯವು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿಭಾವಂತ ಯುವ ಸಮೂಹ ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ಉತ್ಸವವು ಸಹ ಯುವ ಸಮುದಾಯದಲ್ಲಿ ವೈವಿಧ್ಯಮಯ ಚಿಂತನೆ ಬೆಳೆಸುವಲ್ಲಿ ಮತ್ತು ಸೃಜನಶೀಲ ಪ್ರಜ್ಞೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದರು.

ಕುಲಪತಿ ಅನುಭಾ ಸಿಂಗ್‌, ಎಎಲ್‌ಎಫ್‌ ನಿರ್ದೇಶಕ ಸಬಿನ್ ಇಕ್ಬಾಲ್‌, ಶೈನಿ ಆ್ಯಂಟನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.