
DH Bengaluru 2040 Summitಬೆಂಗಳೂರು: 2040ರ ಹೊತ್ತಿಗೆ ಮೆಗಾ ಸಿಟಿಯಾಗಿ ವಿಕಸನಗೊಳ್ಳಲಿರುವ ಬೆಂಗಳೂರನ್ನು ಮುಂಬರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸುವ ಬದಲು, ಆಂತರಿಕ ವಿನ್ಯಾಸಗಳ ಮೂಲಕ ಮುನ್ನಡೆಸಬೇಕು ಎಂದು ಪುರವಂಕರ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕಿ ಅಮಂಡಾ ಜಾಯ್ ಪುರವಂಕರ ಹೇಳಿದ್ದಾರೆ.
ಡೆಕ್ಕನ್ ಹೆರಾಲ್ಡ್ ಬೆಂಗಳೂರು 2040 ಸಮಾವೇಶದಲ್ಲಿ ಮಾತನಾಡಿರುವ ಅವರು, ಬೆಂಗಳೂರಿನ ಸ್ಥಳೀಯರಾಗಿ ನಗರದೊಂದಿಗಿನ ತಮ್ಮ ಒಡನಾಟದ ಕುರಿತು ಹಂಚಿಕೊಂಡಿದ್ದಾರೆ.
'ನನ್ನ ತಂದೆ, 50 ವರ್ಷಗಳಿಂದಲೂ ನಗರದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಶಾಂತ, ಹಸಿರು 'ಉದ್ಯಾನ ನಗರ'ವು ವೇಗ ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಬದಲಾಗುತ್ತಿರುವುದನ್ನು ಗಮನಿಸಿದ್ದೇನೆ' ಎಂದಿದ್ದಾರೆ.
'ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ. ಆದರೆ, ಎಷ್ಟು ಪ್ರಬುದ್ಧರಾಗಿ ನಾವು ಬೆಳೆಯುತ್ತೇವೆ ಎಂಬುದು ಮುಖ್ಯ. ಸಂವೇದನೆ ಇಲ್ಲದೆ, ಮಾನದಂಡಗಳನ್ನು ರೂಪಿಸಿಕೊಳ್ಳುವುದು ಒತ್ತಡ ಸೃಷ್ಟಿಸುತ್ತದೆ. ಮಾನವೀಯತೆ ಇಲ್ಲದ ತಂತ್ರಜ್ಞಾನವು ಸ್ವೇಚ್ಛೆಯಾಗಬಹುದು' ಎಂದು ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಜನಸಂಖ್ಯಾ ಪರಿವರ್ತನೆಯ ಕುರಿತೂ ಮಾತನಾಡಿರುವ ಅವರು, ನಗರದಲ್ಲಿನ ಜನರ ವಯಸ್ಸಿನ ಸರಾಸರಿಯು, ರಾಷ್ಟ್ರೀಯ ಸರಾಸರಿಗಿಂತ 20 ವರ್ಷ ಕಡಿಮೆ ಇದೆ ಎಂದು ಹೇಳಿದ್ದಾರೆ.
'ಹಿಂದಿನ ಮೂಲಸೌಕರ್ಯಗಳು ಹಾಗೂ ಅಂದಾಜುಗಳ ಮೇಲೆ ಯುವ ನಗರವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ. ಪ್ರಜ್ಞಾವಂತ ಆಡಳಿತ ಹಾಗೂ ಮಾನವ – ತಂತ್ರಜ್ಞಾನದ ಸಹಕಾರವಿರುವ ಪರಿಸರ ವ್ಯವಸ್ಥೆಯು ಈ ನಗರದಲ್ಲಿನ ತಾಯಂದಿರ ಬಕೆಯಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.