FIR
– ಕಡತ ಚಿತ್ರ
ಬೆಂಗಳೂರು: ಶ್ರೀಗಂಧದಕಾವಲ್‌ನಲ್ಲಿರುವ ಬಿ.ಆರ್.ಅಂಬೇಡ್ಕರ್ ವಸತಿನಿಲಯದಲ್ಲಿ ಅನಧಿಕೃತವಾಗಿ ವಾಸವಾಗಿದ್ದ 14 ಮಂದಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರ್ಡನ್‌ಗಳಾದ ಮಂಜುನಾಥ್, ವಿಜಯ್ ಕುಮಾರ್ ಹಾಗೂ ವಿದ್ಯಾರ್ಥಿಗಳಾದ ಮನೋಹರ್, ಅರುಣ್ ಕುಮಾರ್, ಶ್ರೀಕಾಂತ್, ಗಣೇಶ್, ಜಯರಾಜ್, ರಘು, ಅಂಜನಪ್ಪ, ಸಂದೇಶ, ಜೀವರತ್ನಂ, ನರೇಂದ್ರ, ಸಾಗರ್, ಕಾರ್ತಿಕ್ ನಾಯಕ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಚಕ್ಷಣಾ ದಳದ ಅಧಿಕಾರಿ ಎಂ.ರಾಜೇಶ್ ಜಯಸಿಂಹನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ವಸತಿ ನಿಲಯದಲ್ಲಿ ಅನರ್ಹ ವ್ಯಕ್ತಿಗಳು ವಾಸವಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ರಾಜೇಶ್ ಜಯಸಿಂಹನ್, ಸಿಬ್ಬಂದಿ ಹಾಗೂ ಡಿಸಿಆರ್‌ಇ ಪೊಲೀಸರು ಸೋಮವಾರ ಬೆಳಿಗ್ಗೆ ವಸತಿನಿಲಯದ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ವಾರ್ಡನ್‌ಗಳು ಹಾಗೂ ವಿದ್ಯಾರ್ಥಿಗಳು ಅನಧಿಕೃತವಾಗಿ ವಾಸವಾಗಿರುವುದು ಗೊತ್ತಾಗಿದೆ. ಅಲ್ಲದೆ, ಇವರಿಗೆ ಅನಧಿಕೃತವಾಗಿ ವಾಸವಾಗಲು ವಾರ್ಡನ್‌ಗಳು ಅವಕಾಶ ನೀಡಿರುವುದು ಗೊತ್ತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.