
ಆನೇಕಲ್: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಬಂದು ರಸ್ತೆ ಬದಿ ಕಸ ಸುರಿಯುವವರ ವಿರುದ್ಧ, ಸಿಸಿಟಿವಿ ಕ್ಯಾಮೆರಾ ವಿಡಿಯೊ ಸಮೇತ ಪುರಸಭೆಯ ಮುಖ್ಯಾಧಿಕಾರಿ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಸ ಸುರಿಯುತ್ತಿರುವವರ ವಾಹನ ವಶಪಡಿಸಿಕೊಳ್ಳುವಂತೆ ಎಂದು ಪತ್ರ ಬರೆದಿದ್ದಾರೆ.
ಕರ್ನಾಟಕ ಪೌರಾಡಳಿತ ಕಾಯ್ದೆ ಸೆಕ್ಷನ್ 224, 263, 276ರಡಿಯಲ್ಲಿ ಎಲ್ಲಂದರಲ್ಲಿ ಕಸ ಎಸೆಯುವುದು ಅಪರಾಧವಾಗಿರುವ ಕಾರಣದಿಂದ ದೂರು ನೀಡಲಾಗಿದೆ.
ಆನೇಕಲ್ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಕತ್ತಲಾಗುತ್ತಿದ್ದಂತೆ ಬೃಹತ್ ವಾಹನಗಳಲ್ಲಿ ಕಸ ತುಂಬಿಸಿಕೊಂಡು ಬಂದು ಕಸ ಸುರಿಯಲಾಗುತ್ತಿದೆ. ಕಸದ ಸಮಸ್ಯೆಗೆ ಹಲವು ಕ್ರಮ ಕೈಗೊಂಡರೂ ಬೇರೆಡೆಯಿಂದ ಬಂದ ಕಸ ಸುರಿಯುವವರು ಹೆಚ್ಚಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.